For Quick Alerts
  ALLOW NOTIFICATIONS  
  For Daily Alerts

  ಕ್ರೆಡಿಟ್ ಕಾರ್ಡ್ ಹ್ಯಾಕ್, ತಾರೆ ಸಮೀರಾ ರೆಡ್ಡಿ ಶಾಖ್

  By Rajendra
  |

  ಬಾಲಿವುಡ್ ತಾರೆ ಸಮೀರಾ ರೆಡ್ಡಿ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿದ್ದು ಆಕೆ ಶಾಖ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಯಾರೋ ಆಗಂತುಕ ಈಕೆಯ ಕ್ರೆಡಿಟ್ ಕಾರ್ಡ್ ಹ್ಯಾಕ್ ಮಾಡಿದ್ದಾನೆ. ವಿಚಿತ್ರ, ವಿಸ್ಮಯ ಎಂದರೆ ಹ್ಯಾಕ್ ಮಾಡಿದ ಪುಣ್ಯಾತ್ಮ ಸ್ವತಃ ಸಮೀರಾಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ.

  ಕೆಟ್ಟೆನಪ್ಪೋ ಕೆಟ್ಟೆ ಎಂದು ಎದ್ದೆನೋ ಬಿದ್ದೆನೋ ಎಂಬಂತೆ ಅಕೌಂಟ್ ಚೆಕ್ ಮಾಡಿದರೆ ಆಗಲೇ ನಾಲ್ಕು ಲಕ್ಷ ರುಪಾಯಿ ಮಂಗಮಾಯವಾಗಿತ್ತು. ಆದರೆ ಈ ಖಾತೆ ಸಿನಿಮಾ ತಾರೆಯೊಬ್ಬಳದು ಎಂದು ಗೊತ್ತಾದ ಕೂಡಲೆ ಕನ್ನ ಹಾಕಿದ ಪುಣ್ಯಾತ್ಮ ಮತ್ತೆ ಆಕೆಯ ಖಾತೆಗೆ ಹಣ ವಾಪಸ್ ಮಾಡಿದ್ದಾನೆ.

  ಆದರೆ ಕನ್ನ ಹಾಕಿದ ಖದೀಮನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇನ್ನೊಂದು ವಿಶೇಷಗಳಲ್ಲಿ ವಿಶೇಷ ಎಂದರೆ ಈ ಕಳ್ಳ ಸಮೀರಾ ರೆಡ್ಡಿಗೆ ಕೆಲವು ಟಿಪ್ಸ್ ಕೂಡ ಕೊಟ್ಟಿದ್ದಾನೆ. ಕ್ರೆಡಿಟ್ ಕಾರ್ಡ್ ಬಗ್ಗೆ ಜಾಗ್ರತೆ ವಹಿಸುವುದು ಹೇಗೆ? ಆನ್‌ಲೈನ ವ್ಯವಹಾರಗಳಲ್ಲಿ ಏನೆಲ್ಲ ಜಾಗ್ರತೆಗಳನ್ನು ಪಾಲಿಸಬೇಕು ಎಂದು ಸಲಹೆಗಳನ್ನು ನೀಡಿದ್ದಾನೆ!

  ಕ್ರೆಡಿಡ್ ಕಾರ್ಡ್ ಸಹವಾಸವೇ ಬೇಡ ಎಂದುಕೊಂಡಿರುವ ಸಮೀರಾ ರೆಡ್ಡಿ ಇನ್ನು ಮುಂದೆ ಕಾರ್ಡ್‍‌ ಗೆ ಬದಲಾಗಿ ಕ್ಯಾಶ್ ಬಳಸಲು ನಿರ್ಧರಿಸಿದ್ದಾರೆ. ಈ ಹಿಂದೊಮ್ಮೆ ಸಮೀರಾ ರೆಡ್ಡಿ ಕನ್ನಡದಲ್ಲಿ ಅಭಿನಯಿಸಬೇಕೆಂಬ ತಮ್ಮ ತೀರದ ಬಯಕೆಯನ್ನು ತೋಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)

  English summary
  Block beauty Sameera Reddy was shocked to see that her credit card had been hacked by someone. And the interesting news is that the hacker actually called up the actress to tell her about it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X