»   » ಸಮೀರಾ ರೆಡ್ಡಿ ಸಂಭಾವನೆ ಓದಿ ಬೆಚ್ಚಿಬೀಳಬೇಡಿ

ಸಮೀರಾ ರೆಡ್ಡಿ ಸಂಭಾವನೆ ಓದಿ ಬೆಚ್ಚಿಬೀಳಬೇಡಿ

Posted By:
Subscribe to Filmibeat Kannada

ಕನ್ನಡದಲ್ಲಿ ಇದುವೆರೆಗೂ ಯಾವ ನಟಿಯೂ ಪಡೆಯದಿದ್ದ ಸಂಭಾವನೆಯನ್ನು ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಸುದೀಪ್ ಜೊತೆ ಬಣ್ಣ ಹಚ್ಚುತ್ತಿರುವ ನಟಿ ಸಮೀರಾ ರೆಡ್ಡಿ ಪಡೆದಿದ್ದಾರೆ ಎನ್ನುತ್ತಿವೆ ಸುದ್ದಿಮೂಲಗಳು. ಅದೆಷ್ಟು ಎಂಬುದು ಪಕ್ಕಾ ತಿಳಿಯದಿದ್ದರೂ ಅದು 50 ಲಕ್ಷಕ್ಕಿಂತ ಹೆಚ್ಚು ಎನ್ನಲಾಗುತ್ತಿದೆ. ಸಾಕ್ಷಿಗೆ ಮುಂದಿನದನ್ನು ಓದಿ...

ರಿಯಲ್ ಸ್ಟಾರ್ ಉಪೇಂದ್ರ 'ಸೂಪರ್' ಚಿತ್ರಕ್ಕೆ ನಟಿ ನಯನತಾರಾ ಬರೋಬ್ಬರಿ 50 ಲಕ್ಷ ಕೇಳಿದ್ದರು. ಕನ್ನಡದ ಲಕ್ಕಿ ಸ್ಟಾರ್ ರಮ್ಯಾ 45 ಲಕ್ಷ ರು. ಗೆ ಒಂದು ಪೈಸೆ ಕಡಿಮೆಯಾದರೂ ಒಪ್ಪುವುದಿಲ್ಲ. ಇನ್ನು ರಾಧಿಕಾ ಪಂಡಿತ್ ಹಾಗೂ ರಾಗಿಣಿ ದ್ವಿವೇದಿ ಕೂಡ 30 ಲಕ್ಷಕ್ಕಿಂತ ಕಡಿಮೆಗೆ ನಟಿಸುವುದಿಲ್ಲ. ಹಾಗಾದರೆ ಅದು ಖಂಡಿತ 50 ಲಕ್ಷಕ್ಕಿಂತ ಹೆಚ್ಚೇ.

ಹೀಗಿರುವಾಗ ನಾಯಕಿ ಅಲ್ಲದಿದ್ದರೂ ಪ್ರಮುಖ ಪಾತ್ರವೊಂದರಲ್ಲಿ ವರದನಾಯಕದಲ್ಲಿ ನಟಿಸುತ್ತಿರುವ ಸಮೀರಾ, 50 ಲಕ್ಷಕ್ಕಿಂತ ಹೆಚ್ಚಿಗೆ ಸಂಭಾವನೆ ಪಡೆದಿದ್ದಾರೆ. ಈ ಕುರಿತು ವರದನಾಯಕ ನಿರ್ಮಾಪಕ ಶಂಕರೇಗೌಡ್ರನ್ನು ಕೇಳಿದರೆ "ಇದುವರೆಗೆ ಕನ್ನಡದಲ್ಲಿ ಯಾವುದೇ ನಟಿಗೆ ಕೊಡದಷ್ಟು ಸಂಭಾವನೆ ಕೊಟ್ಟಿರೋದು ನಿಜ. ಎಷ್ಟೆಂಬುದನ್ನು ಬಹಿರಂಗ ಮಾಡುವುದಿಲ್ಲ." ಎಂದಿದ್ದಾರೆ.

ಆದ್ರೆ ಎಷ್ಟು ಕೊಟ್ರಿ 35 ಲಕ್ಷಕ್ಕಿಂತ ಹೆಚ್ಚಾ ಅಂತ ಕೇಳಿದರೆ. "ಓಹ್, ಅದಕ್ಕಿಂತ ತುಂಬಾನೆ ಹೆಚ್ಚು" ಅಂದಿದ್ದಾರೆ. ಅಲ್ಲಿಗೆ ನೀವೇ ಊಹಿಸಿಕೊಳ್ಳಿ, ನಯನತಾರಾಗಿಂತಲೂ ಹೆಚ್ಚು ಅಂದಮೇಲೆ 50 ಲಕ್ಷ ದಾಟಿರುವುದು ದಿಟ, ರಾಮ ರಾಮಾ...! ಇದೆಲ್ಲಾ ಸಮೀರಾ ಬಾಲಿವುಡ್ ನಿಂದ ಬಂದಿರುವುದರ ಮಹಿಮೆ. (ಒನ್ ಇಂಡಿಯಾ ಕನ್ನಡ)

English summary
There is a news that actress Sameera Reddy demanded more than Rs. 50 lakhs, as Remuneration for Kannada Movie Varadanayaka. 
 
Please Wait while comments are loading...