»   »  ರಾಮ್ ಚಿತ್ರದ ನಾಯಕಿಯಾಗಿ ಅದಿತಿ ಶರ್ಮಾ

ರಾಮ್ ಚಿತ್ರದ ನಾಯಕಿಯಾಗಿ ಅದಿತಿ ಶರ್ಮಾ

Posted By:
Subscribe to Filmibeat Kannada
Aditi Sharma debuts in Kannada
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರಕ್ಕೆ ಬಾಲಿವುಡ್ ನಟಿ ಅದಿತಿ ಶರ್ಮಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಮ್ ಚಿತ್ರದ ನಾಯಕಿ ಪಾತ್ರಕ್ಕೆ ಜೆನಿಲಿಯಾ, ತಮನ್ನಾ ಮುಂತಾದ ಹೆಸರುಗಳು ಕೇಳಿಬಂದಿದ್ದವು. ಅಂತೂ ನಿರ್ಮಾಪಕ ಆದಿತ್ಯ ಬಾಬು ಅವರಿಗೆ ರಾಮ್ ಚಿತ್ರೀಕರಣ ಆರಂಭವಾದ ನಂತರ ನಾಯಕಿ ಸಿಕ್ಕಿದ್ದಾಳೆ.

ಅದಿತಿ ಶರ್ಮಾ ಮೂಲತಃ ಪಂಜಾಬಿನವರು. ಪ್ರಸ್ತುತ ಅದಿತಿ ಮುಂಬೈನಲ್ಲಿ ವಾಸವಾಗಿದ್ದಾರೆ. ಪೋಷಕರು ಲಕ್ನೊದಲ್ಲಿದ್ದಾರೆ. ಈಗಾಗಲೇ ಹಿಂದಿಯಲ್ಲಿ ಎರಡು, ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸುಭಾಷ್ ಘಾಯ್ ಅವರ 'ಬ್ಲಾಕ್ ಅಂಡ್ ವೈಟ್' ಹಾಗೂ ಕನ್ನಡಿಗ ಹೇಮಂತ್ ಹೆಗ್ಡೆ ನಿರ್ದೇಶಿಸಿದ್ದ 'ಖಾನ್ ಅಂಡ್ ಅಯ್ಯರ್' ಆಕೆ ನಟಿಸಿದ ಎರಡು ಹಿಂದಿ ಚಿತ್ರಗಳು. ರಾಮ್ ಮೂಲಕ ಕನ್ನಡದ ಚಿತ್ರರಂಗಕ್ಕೆ ಅದಿತಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಪ್ರಸ್ತುತ ದೆಹಲಿ ವಿವಿಯಲ್ಲಿ ಪದವಿ ಓದುತ್ತಿರುವ ಅದಿತಿ ಶರ್ಮಾ, 2004ರಲ್ಲಿ ಜೀ ಟಿವಿ ನಡೆಸಿದ ಟ್ಯಾಲೆಂಟ್ ಹಂಟ್ ನಲ್ಲಿ ಮಿಂಚಿದ್ದರು. ತೆಲುಗಿನ 'ಗುಂಡೆ ಜಲ್ಲುಮಂದಿ' ಚಿತ್ರದಲ್ಲಿ ಉದಯ್ ಕಿರಣ್ ಗೆ ನಾಯಕಿಯಾಗಿ ನಟಿಸಿದ್ದರು. ತೆಲುಗಿನ 'ರೆಡಿ'ಚಿತ್ರ ಕನ್ನಡಕ್ಕೆ 'ರಾಮ್' ಆಗುತ್ತಿರುವುದು ಗೊತ್ತೇ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada