»   » ಅಭಿನೇತ್ರಿ ಭಾರತಿ ವಿಷ್ಣುವರ್ಧನ್ ಜೊತೆ ಮಾತುಕತೆ

ಅಭಿನೇತ್ರಿ ಭಾರತಿ ವಿಷ್ಣುವರ್ಧನ್ ಜೊತೆ ಮಾತುಕತೆ

Posted By:
Subscribe to Filmibeat Kannada

ಅರುವತ್ತರಿಂದ ಎಂಭತ್ತರ ದಶಕದ ತನಕ ಕನ್ನಡ ಬೆಳ್ಳಿಪರದೆಯನ್ನು ಬೆಳಗಿದ ಅಭಿನೇತ್ರಿ ಭಾರತಿ ವಿಷ್ಣುವರ್ಧನ್. ಅವರೊಂದಿಗೆ ಮಾತುಕತೆ ಎಂದರೆ ಕನ್ನಡ ಚಿತ್ರರಂಗದ ಸುವರ್ಣ ಪುಟಗಳನ್ನು ಒಂದೊಂದಾಗಿ ತಿರುವಿ ಹಾಕಿದಂತೆ. ಈ ಒಂದು ಸದಾವಕಾಶವನ್ನು ಕಲ್ಪಿಸುತ್ತಿದೆ ಕರ್ನಾಟಕ ಚಲನಚಿತ್ರ ಅಕಾಡೆಮಿ ತನ್ನ ವಿಶಿಷ್ಟ ಹಾಗೂ ಜನಪ್ರಿಯ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'ಯಲ್ಲಿ.

ಇದೇ ಶನಿವಾರ (ಅ.9) ಬೆಂಗಳೂರಿನ ಬಾದಾಮಿ ಹೌಸ್ ನಲ್ಲಿ ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಸುಮಾರು ಎರಡು ಗಂಟೆಗಳ ಕಾಲ ಭಾರತಿ ಅವರ ಜೀವನದ ಬಂಗಾರದ ಕ್ಷಣಗಳನ್ನು ಮೆಲುಕು ಹಾಕಬಹುದು. ಭಾರತಿ ವಿಷ್ಣುವರ್ಧನ್ ಅವರು ಹುಟ್ಟಿದ್ದು ಆಗಸ್ಟ್ 15, 1949ರಂದು. 'ದುಡ್ಡೆ ದೊಡ್ಡಪ್ಪ' (1966) ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ. ಅದೇ ವರ್ಷ ಅವರು 'ಲವ್ ಇನ್ ಬೆಂಗಳೂರು' ಚಿತ್ರದಲ್ಲಿ ನಾಯಕಿಯಾಗಿ ಸಿನಿಮಾರಂಗಕ್ಕೆ ಪ್ರವೇಶ.

ಎಮ್ಮೆ ತಮ್ಮಣ್ಣ, ಸಂಧ್ಯಾ ರಾಗ, ಗಂಗೆ ಗೌರಿ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಮೇಯರ್ ಮುತ್ತಣ್ಣ, ಶ್ರೀ ಕೃಷ್ಣದೇವರಾಯ, ಬಂಗಾರದ ಮನುಷ್ಯ, ಹೃದಯ ಸಂಗಮ, ದೇವರ ಗುಡಿ, ನಾಗರಹೊಳೆ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಮರೆಯಲಾಗದ ಅಭಿನಯ ನೀಡಿದ್ದಾರೆ. ಅವರ ಅಭಿನಯದ ನೂರನೇ ಚಿತ್ರ ಭಾಗ್ಯ ಜ್ಯೋತಿ.

ಫೆಬ್ರವರಿ 27, 1975 ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ವರಿಸಿದ ಬಳಿಕ ಭಾರತಿ ಅವರು ಚಿತ್ರಗಳಲ್ಲಿ ಅಭಿನಯಿಸುವುದನ್ನು ಹಂತಹಂತವಾಗಿ ಕಡಿಮೆ ಮಾಡಿದರು. ಪ್ರೀತಿ ಪ್ರೇಮ ಪ್ರಣಯ, ಋಣಮುಕ್ತ, ಮೆಗಾ ಟಿವಿ ಧಾರಾವಾಹಿ 'ಜನನಿ' ಚಿತ್ರಗಳು ಅವರ ಅಭಿನಯಕ್ಕೆ ಕನ್ನಡಿ ಹಿಡಿಯುತ್ತವೆ. ಪುನೀತ್ ರಾಜ್ ಕುಮಾರ್ ಅವರ 'ರಾಜ್' ಚಿತ್ರದ ಹಾಡೊಂದರಲ್ಲಿ ಭಾರತಿ ಅವರು ಕಾಣಿಸಿಕೊಂಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada