»   »  ನವದೆಹಲಿಯಲ್ಲಿ ದಾಟು ಚಿತ್ರ ಪ್ರದರ್ಶನ

ನವದೆಹಲಿಯಲ್ಲಿ ದಾಟು ಚಿತ್ರ ಪ್ರದರ್ಶನ

Subscribe to Filmibeat Kannada

ರಾಜ್ಯ ಪ್ರಶಸ್ತಿ ವಿಜೇತ(ವಿಶೇಷ ಜ್ಯೂರಿ) ದಾಟು ಚಿತ್ರದ ವಿಶೇಷ ಪ್ರದರ್ಶನವನ್ನು ನವದೆಹಲಿಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಈ ಚಿತ್ರದಲ್ಲಿ ನಿರ್ಮಾಪಕಿ ರೂಪಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ದತ್ತಣ್ಣ, ಕಿರುತೆರೆ ನಟ ರಾಜೇಶ್ ಮುಂತಾದವರಿದ್ದಾರೆ. ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಶಿವರುದ್ರಯ್ಯ ನವರು ಈ ಚಿತ್ರದ ನಿರ್ದೇಶಕರು. ಕಾದಂಬರಿಕಾರ ದಿ.ಅಶ್ವತ್ಥ ಅವರ "ಧರ್ಮಕೊಂಡದ ಕಥೆ" ಆಧಾರಿಸಿ ಚಿತ್ರ ತಯಾರಿಸಲಾಗಿದೆ.

ಸ್ಥಳ: ಕರ್ನಾಟಕ ಸಂಘ ಆಡಿಟೋರಿಯಂ, ನವದೆಹಲಿ
ದಿನಾಂಕ: ಜನವರಿ 10
ಸಮಯ: 4 ಗಂಟೆ

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada