»   » ಸಂಕ್ರಾಂತಿ ಹಬ್ಬಕ್ಕೆ 'ಪೊರ್ಕಿ' ದರ್ಶನ

ಸಂಕ್ರಾಂತಿ ಹಬ್ಬಕ್ಕೆ 'ಪೊರ್ಕಿ' ದರ್ಶನ

Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಪೊರ್ಕಿ' ಚಿತ್ರ ಸಂಕ್ರಾಂತಿ (ಜ.14) ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ದರ್ಶನ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಬಜೆಟ್ ನ ಚಿತ್ರ ಎಂಬ ಹೆಗ್ಗಳಿಕೆಗೆ 'ಪೊರ್ಕಿ' ಪಾತ್ರವಾಗಿದೆ. ಎಂ ಡಿ ಶ್ರೀಧರ್ ನಿರ್ದೇಶನದ 'ಪೊರ್ಕಿ' ಚಿತ್ರವನ್ನು ದತ್ತಾತ್ರೇಯ ಬಚ್ಚೇಗೌಡ ನಿರ್ಮಿಸಿದ್ದು ಪತ್ರಕರ್ತ ಗಣೇಶ್ ಕಾಸರಗೋಡು ಅರ್ಪಿಸುತ್ತಿದ್ದಾರೆ.

ರು.7 ಕೋಟಿ ಬಜೆಟ್ ನಲ್ಲಿ ಪೊರ್ಕಿ ಚಿತ್ರವನ್ನು ತೆರೆಗೆ ತರಲಾಗಿದೆ. ರು. 5.5 ಕೋಟಿ ವೆಚ್ಚದಲ್ಲಿ 'ಪೊರ್ಕಿ'ಯನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. ಕಲಾವಿದರ ಸಂಭಾವನೆ ಸೇರಿದಂತೆ ಚಿತ್ರದ ವೆಚ್ಚ ಬರೋಬ್ಬರಿ ರು.7 ಕೋಟಿಯಷ್ಟಾಗಿದೆ ಎನ್ನುತ್ತಾರೆ ನಿರ್ಮಾಪಕ ದತ್ತಾತ್ರೇಯ.

ಪೊರ್ಕಿ ಚಿತ್ರದ ಧ್ವನಿಸುರುಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಕಂತಿನಲ್ಲಿ 15000 ಆಡಿಯೋ ಸಿಡಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತಷ್ಟು ಸಿಡಿಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಲಹರಿ ಆಡಿಯೋ ಕಂಪನಿಯ ಮಾಲೀಕ ವೇಲು. ಒಟ್ಟು ಐದು ಹಾಡುಗಳಲ್ಲಿ ಮೂರು ಹಾಡುಗಳು ಅತ್ಯುತ್ತಮವಾಗಿವೆ ಎನ್ನುತ್ತಾರೆ ವೇಲು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada