»   »  ಬ್ಯಾಂಕಾಕ್ ನತ್ತ ಮೂರು ಕನ್ನಡ ಚಿತ್ರಗಳ ಪಯಣ

ಬ್ಯಾಂಕಾಕ್ ನತ್ತ ಮೂರು ಕನ್ನಡ ಚಿತ್ರಗಳ ಪಯಣ

Subscribe to Filmibeat Kannada
Nidhi Subbaiah
ಹಾಡುಗಳ ಚಿತ್ರೀಕರಣಕ್ಕಾಗಿ ಕನ್ನಡ ಚಿತ್ರಗಳು ವಿದೇಶಕ್ಕೆ ಹಾರುವುದು ಹೊಸದಲ್ಲ. ಅದರಲ್ಲೂ ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ಎಂದರೆ ಕನ್ನಡ ಚಿತ್ರಗಳಿಗೆ ಎತ್ತಿದ ಕೈ. ಹಾಡುಗಳ ಚಿತ್ರೀಕರಣಕ್ಕಾಗಿ ಮೂರು ಕನ್ನಡ ಚಿತ್ರಗಳು ಬ್ಯಾಂಕಾಕ್ ಗೆ ತೆರಳಲು ಸಿದ್ಧವಾಗಿವೆ.

ಕೋಮಲ್ ಅಭಿನಯದ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಏಪ್ರಿಲ್ 7ರಂದು ಬ್ಯಾಂಕಾಕ್ ಗೆ ಹಾರಲಿದೆ. ಮಲೇಶಿಯಾದಲ್ಲಿನ ಚಿತ್ರೀಕರಣ ಅಂದುಕೊಂಡಂತೆ ಬರಲಿಲ್ಲ. ಹಾಗಾಗಿ ಬ್ಯಾಂಕಾಕ್ ನತ್ತ ಪ್ರಯಾಣ ಬೆಳಸಿದ್ದೇವೆ ಎನ್ನುತ್ತಾರೆ ಕೋಮಲ್. ಈಗಾಗಲೇ ಮಲೇಶಿಯಾ ಮತ್ತು ಲಂಕಾವಿ ದ್ವೀಪಗಳಲ್ಲಿ ಚಮಾಯ್ಸಿ ಚಿತ್ರೀಕರಣ ನಡೆದಿದೆ. ಅನಸೂಯ ಹಾಗೂ ಜೀವನ್ ಚಿತ್ರದ ನಿರ್ಮಾಪಕರು. ನಿರ್ದೇಶನ ಎ ಆರ್ ಬಾಬು, ಚಿತ್ರದ ನಾಯಕಿ ನಿಧಿ ಸುಬ್ಬಯ್ಯ.

ದರ್ಶನ್ , ಆರತಿ ಠಾಕೂರ್ ಅಭಿನಯದ 'ಅಭಯ್'ಚಿತ್ರವೂ ಬ್ಯಾಂಕಾಕ್ ಗೆ ತೆರಳುವ ಸಿದ್ಧತೆಯಲ್ಲಿದೆ. ಏಪ್ರಿಲ್ 10ರಿಂದ ಬ್ಯಾಂಕಾಗೆ ಅಭಯ್ ಚಿತ್ರತಂಡ ಪ್ರಯಾಣ ಬೆಳೆಸಲಿದೆ. ಸ್ವಿಡ್ಜರ್ ಲ್ಯಾಂಡ್ ನಲ್ಲೂ ಚಿತ್ರೀಕರಣ ನಡೆಯಲಿದೆ. ಈ ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ.

ಏಪ್ರಿಲ್ 18ಕ್ಕೆ ಮತ್ತೊಂದು ಕನ್ನಡ ಚಿತ್ರ 'ಬಿಂದಾಸ್ ಹುಡುಗಿ' ಸಹ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್ ಗೆ ತೆರಳಲಿದೆ. ಎರಡು ಹಾಡುಗಳನ್ನು ಬ್ಯಾಂಕಾಕ್ ಮತ್ತು ಪುಕೆಟ್ ಗಳಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಚಿತ್ರದಲ್ಲಿ ನಟಿಸಿ, ನಿರ್ದೇಶಿಸುತ್ತಿರುವ ಪ್ರಿಯಾಹಾಸನ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್ ಗೆ ಹೋಗಿಬರುವುದು ಎಂದರೆ ಕನ್ನಡ ಚಿತ್ರರಂಗಕ್ಕೆ ಪಕ್ಕದ ಮನೆಗೆ ಹೋಗಿ ಬಂದಷ್ಟು ಸಲೀಲಾಗಿಬಿಟ್ಟಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ವಿದೇಶದಿಂದ ವಿದೇಶಕ್ಕೆ ಚಂಕಾಯ್ಸಿ ಚಿಂದಿ ಉಡಾಯ್ಸಿ'
'ಬಿಂದಾಸ್ ಹುಡುಗಿ'ಯಾಗಿ ಪ್ರಿಯಾ ಹಾಸನ್
ಕಾಮಿಡಿ ಪಂಚ್ ಉಳ್ಳ ಹೊಸ ಚಿತ್ರದಲ್ಲಿ ದರ್ಶನ್
ದರ್ಶನ್ ಗೆ ಜೋಡಿಯಾದ ಮಿಸ್ಸೆಸ್ ಇಂಡಿಯಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada