For Quick Alerts
  ALLOW NOTIFICATIONS  
  For Daily Alerts

  ದಿಗಂತ್ ಗೆ ಪ್ರಿಯಾಂಕಾ ಪಂಚರಂಗಿ ಪಾಠಗಳು

  By Rajendra
  |

  ಬೆಳ್ಳಿಪರದೆಯಿಂದ ಕಾಣೆಯಾಗಿದ್ದ ಪ್ರಿಯಾಂಕ ಉಪೇಂದ್ರ ಇದೀಗ ಮತ್ತೆ ಪ್ರತ್ಯಕ್ಷವಾಗಲಿದ್ದಾರೆ. ಸೂಪರ್ ಸ್ಟಾರ್ ಉಪೇಂದ್ರ ಅವರನ್ನು ವರಿಸಿದ ಬಳಿಕ ಮನೆ, ಮಕ್ಕಳು ಎಂದು ಪ್ರಿಯಾಂಕ ಕಳೆದುಹೋಗಿದ್ದರು. ಇದೀಗ ಯೋಗರಾಜಭಟ್ ನಿರ್ದೇಶನದ ಪಂಚರಂಗಿ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಯತ್ತ ಮುಖಮಾಡಿದ್ದಾರೆ.

  ಈ ಚಿತ್ರದಲ್ಲಿ ಪ್ರಿಯಾಂಕಾ ಶಿಕ್ಷಕಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅವರು ಪಾಠ ಮಾಡಲಿರುವುದು ನಾಯಕ ನಟ ದಿಗಂತ್ ಗೆ. ಟೀಚರ್ ಪಾತ್ರ ಪ್ರಿಯಾಂಕಾ ಅವರಿಗೆ ತುಂಬಾ ಇಷ್ಟವಾಗಿದೆಯಂತೆ. ನಿಧಿ ಸುಬ್ಬಯ್ಯ್ಯ ಹಾಗೂ ದಿಗಂತ್ ರ ಜೊತೆಗಿನ ಹಾಡಿನಲ್ಲಿ ಪ್ರಿಯಾಂಕ ಕಾಣಿಸಲಿದ್ದಾರೆ. ದಿಗಂತ್ ಗೆ ಪ್ರಿಯಾಂಕಾ ಯಾವ ಪಾಠ ಹೇಳಿಕೊಡುತ್ತಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್.

  ಬಾಲಿವುಡ್ ನ "ಮೈ ಹೂ ನಾ" ಚಿತ್ರದಲ್ಲಿ ಸುಸ್ಮಿತಾ ಸೇನ್ ಪಾತ್ರಕ್ಕೆ ಪ್ರಿಯಾಂಕಾ ಪಾತ್ರ ಹತ್ತಿರವಾಗಿದೆಯಂತೆ. ಆಧುನಿಕ ಮಂಕುತಿಮ್ಮನ ಕಗ್ಗ್ಗ ರೀತಿಯಲ್ಲಿ ಹಾಡನ್ನು ಹೆಣೆಯಲಾಗಿದೆ. ಸಂಗೀತ ಸಂಯೋಜನೆ ಮನೋಮೂರ್ತಿ ಅವರದು. ಉಡುಪಿ ಹಾಗೂ ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿ ಚಿತ್ರೀಕರಣ ರಸವತ್ತಾಗಿ ಸಾಗಿದೆ.

  ಪ್ರಿಯಾಂಕಾ ಟೀಚರ್ ಪಾತ್ರಕ್ಕೆ ಉಪೇಂದ್ರ ಯಾವುದೇ ರೀತಿ ಅಭ್ಯಂತರ ವ್ಯಕ್ತಪಡಿಸಿಲ್ಲವಂತೆ. ಹೊಸ ಗೆಟಪ್ಪಿನ ತಮ್ಮ ಪಾತ್ರದ ಬಗ್ಗೆ ಪ್ರಿಯಾಂಕಾ ಸಂತಸ ವ್ಯಕ್ತಪಡಿಸಿದ್ದಾರೆ. ವರ್ಣರಂಜಿತ ಸೀರೆ, ಚಮಕಿ ಬಟ್ಟಿನ ರವಿಕೆ ತೊಟ್ಟು ನಟಿಸುತ್ತಿರುವುದು ನಿಜಕ್ಕೂ ಥ್ರಿಲ್ ಕೊಟ್ಟಿದೆ ಎನ್ನುತ್ತಾರೆ ಪ್ರಿಯಾಂಕಾ.

  English summary
  Actress Priyanka Upendra is playing Diganth's teacher in director Yogaraj Bhat's forthcoming movie, Pancharangi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X