Just In
Don't Miss!
- News
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಶುಭ ಸುದ್ದಿ
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪುನೀತ್ ಟ್ವಿಟ್ಟರ್, ಫೇಸ್‌ಬುಕ್, ಆರ್ಕುಟ್ ಅಕೌಂಟ್‌ಗಳು ನಕಲಿ
ಜನಪ್ರಿಯ ನಟನೊಬ್ಬನ ಹೆಸರಲ್ಲಿ ಇನ್ಯಾರೋ ಟ್ವಿಟ್ಟರ್, ಫೇಸ್‌ಬುಕ್, ಆರ್ಕುಟ್ ಅಕೌಂಟ್‌ಗಳನ್ನು ತೆರೆಯುವುದು ಇಂಟರ್‌ನೆಟ್‌ನಲ್ಲಿ ಮಾಮೂಲಿ. ಇದು ಅಸಲಿಯೋ ನಕಲಿಯೋ ಎಂದು ಯೋಚಿಸುವಷ್ಟು ವ್ಯವಧಾನ ಇಲ್ಲದ ಅಭಿಮಾನಿಗಳು ನಕಲಿ ಖಾತೆಗಳನ್ನೇ ಫಾಲೋ ಮಾಡುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ವಿಷಯದಲ್ಲೂ ಹೀಗೆ ಹಾಗಿದೆ.
"ನಾನು ಫೇಸ್‌ಬುಕ್, ಟ್ವಿಟ್ಟರ್, ಆರ್ಕುಟ್ ಎಲ್ಲೂ ಇಲ್ಲ. ನನ್ನ ಹೆಸರಿನಲ್ಲಿರುವ ಖಾತೆಗಳೆಲ್ಲಾ ನಕಲಿ" ಎಂದು ಪುನೀತ್ ಸ್ಪಷ್ಟಪಡಿಸಿದ್ದಾರೆ. ಜೀವನ್ ಭೀಮಾನಗರದ ಡೈಕಿನ್ ಸಲೂಷನ್ಸ್ ಪ್ಲಾಜಾದಲ್ಲಿ ಜಪಾನ್‌ನ ಡೈಕಿನ್ ಮಾಡೆಲ್ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಪುನೀತ್ ಹೀಗೆ ಹೇಳಿದರು. ಕೆಲವೇ ದಿನಗಳಲ್ಲಿ ತಮ್ಮದೇ ಆದಂತಹ ವೆಬ್‌ಸೈಟ್ ಹಾಗೂ ಟ್ವಿಟ್ಟರ್ ಖಾತೆಯನ್ನು ತೆರೆಯುವುದಾಗಿ ಅವರು ತಿಳಿಸಿದರು.
ಅಂದಹಾಗೆ 'ಹುಡುಗರು' ಚಿತ್ರವನ್ನು ವಿಭಿನ್ನವಾಗಿ ಆನ್‌ಲೈನ್‌ನಲ್ಲಿ ಪ್ರಚಾರ ಮಾಡಲು ಪುನೀತ್ ಮುಂದಾಗಿದ್ದಾರೆ. ಈ ಮೂಲಕ ಟೆಕ್ಕಿಗಳನ್ನು ಆಕರ್ಷಿಸುವ ಇರಾದೆ ಅವರದು. ಸದ್ಯಕ್ಕೆ ಐಪಿಎಲ್ ಕ್ರಿಕೆಟ್ ನೋಡುವುದರಲ್ಲಿ ಬ್ಯುಸಿಯಾಗಿದ್ದೇನೆ ಎಂದರು. ಪುನೀತ್ ಅವರ ನಕಲಿ ಆರ್ಕುಟ್ ಹಾಗೂ ಫೇಸ್‌ಬುಕ್ ಖಾತೆಗಳನ್ನು ಅಸಲಿ ಎಂದುಕೊಂಡು ಬಹಳಷ್ಟು ಅಭಿಮಾನಿಗಳು ಹಳ್ಳಕ್ಕೆ ಬಿದ್ದಾಗಿದೆ. ಇವೆಲ್ಲಾ ನಕಲಿ ಎಂದು ಮುಂಚೆಯೇ ಹೇಳಿದ್ದರೆ ಚೆನ್ನಾಗಿತ್ತು ಎಂಬ ಸಣ್ಣ ಕೊರಗು ಅಭಿಮಾನಿಗಳಿಗಿದೆ.