»   » ಅನು ಚಿತ್ರದಲ್ಲಿ ಟಿವಿ9 ಕನ್ನಡ ವರದಿಗಾರ್ತಿ ಸುಗುಣ

ಅನು ಚಿತ್ರದಲ್ಲಿ ಟಿವಿ9 ಕನ್ನಡ ವರದಿಗಾರ್ತಿ ಸುಗುಣ

Subscribe to Filmibeat Kannada
TV9 Kannada reporter Suguna
ಪತ್ರಕರ್ತರು ಪತ್ರಕರ್ತರಾಗಿಯೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಬಲು ಅಪರೂಪ. ಈ ಅಪರೂಪವಾದ ಅವಕಾಶ ಟಿವಿ9 ಕನ್ನಡ ವರದಿಗಾರ್ತಿ ಸುಗುಣ ಅವರಿಗೆ ಲಭಿಸಿದೆ. ಪೂಜಾಗಾಂಧಿ ಮುಖ್ಯಪಾತ್ರದಲ್ಲಿ ನಟಿಸಿರುವ 'ಅನು' ಚಿತ್ರದಲ್ಲಿ ಸುಗುಣ ವರದಿಗಾರ್ತಿಯಾಗಿ ಕಾಣಿಸಲಿದ್ದಾರೆ. ತಮ್ಮ ಪಾತ್ರದ ಬಗ್ಗೆ ಸುಗುಣ ಅವರಿಗೆ ಸಖತ್ ಖುಷಿಯಾಗಿದೆಯಂತೆ.

ಟಿವಿ9 ಸುದ್ದಿಮನೆ ಒಂದು ವಿಧದಲ್ಲಿ ತುಂಬಿದ ಮನೆ ಇದ್ದಂತೆ. ವರದಿಗಾರ್ತಿ ಸುಗುಣ ಅಂದ್ರೆ ಅಷ್ಟಾಗಿ ಗೊತ್ತಾಗುವುದಿಲ್ಲ.ಅದೇ ಟಿವಿ9ನಲ್ಲಿ ಪ್ರಸಾರವಾಗುವ 'ಗಲ್ಲಿ ಗಾಸಿಪ್' ಮತ್ತು 'ಫಿಲ್ಮಿ ಫಂಡಾ' ಕಾರ್ಯಕ್ರಮಗಳನ್ನು ಕೇಳಿದವರಿಗೆ ಸುಗುಣ ಅವರ ಧ್ವನಿ ಪರಿಚಯ ಇದ್ದೇ ಇರುತ್ತದೆ! ಒಟ್ಟಿನಲ್ಲಿ ರಿಯಲ್ ಲೈಫ್ ನಿಂದ ರೀಲ್ ಲೈಫ್ ಗೆ ಎಂಟ್ರಿ. ಮೂಲತಃ ಸುಗುಣ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನವರು. ಓದಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಎಂಎಸ್ಸಿ(ಎಲೆಕ್ಟ್ರಾನಿಕ್ಸ್). ನೆಲೆಕಂಡುಕೊಂಡಿದ್ದು ಟಿವಿ9 ಸುದ್ದಿಮನೆಯಲ್ಲಿ. ಕಾಲೇಜಿನ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡ ಪ್ರತಿಭಾವಂತೆ ಸುಗುಣ.

''ನಿರ್ದೇಶಕ ಶಿವಗಣಪತಿ ಈ ಪಾತ್ರವನ್ನು ನನಗೆ ನೀಡಿದಾಗ, ಒಂದೇ ದಿನದಲ್ಲಿ ನಿಮ್ಮ ಪಾತ್ರವನ್ನು ಮುಗಿಸುತ್ತೇನೆ ಎಂದರು. ಆದರೆ ಅದು 10 ದಿನಗಳನ್ನು ತೆಗೆದುಕೊಂಡಿತು. ಇದೊಂದು ಅವಿಸ್ಮರಣೀಯ ಅನುಭವ ಎನ್ನುತ್ತಾರೆ ಸುಗುಣ. ನಿತ್ಯ ಕ್ಯಾಮೆರಾ ಕಣ್ಣನ್ನು ಎದುರಿಸಬೇಕಾಗಿರುವುದರಿಂದ ನನಗೇನು ಭಯವಾಗಲಿಲ್ಲ. ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಅವರು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಚಿತ್ರದಲ್ಲಿ ಪೂಜಾಗಾಂಧಿ ಮತ್ತು ನನ್ನ ಪಾತ್ರ ಸಮನಾಗಿದೆ. ಒಟ್ಟಿನಲ್ಲಿ ಇದೊಂದು ರೋಮಾಂಚಕಾರಿ ಅನುಭವ. ಈ ಚಿತ್ರದಲ್ಲಿ ನಟಿಸಲು ನಮ್ಮ ಟಿವಿ9 ಕಚೇರಿಯಿಂದ ಅನುಮತಿ ಪಡೆದಿದ್ದೆ'' ಎಂದರು ಸುಗುಣ.

(ದಟ್ಸ್ ಕನ್ನಡ ಚಿತ್ರವಾರ್ತೆ)
ವಿಶಿಷ್ಟ ಕಥೆಯುಳ್ಳ ಅನು ಚಿತ್ರಕ್ಕೆ ಸೆನ್ಸಾರ್ ಪೂರ್ಣ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada