Just In
Don't Miss!
- Automobiles
ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು
- News
ತಮಿಳುನಾಡು ರಾಜಕಾರಣದಲ್ಲಿ ಆಟ ಶುರು ಮಾಡುತ್ತಾರಾ "ಚಿನ್ನಮ್ಮ"?
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Sports
SMAT: ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಬರೋಡಾವನ್ನು ಸೆಮಿಫೈನಲ್ಗೇರಿಸಿದ ವಿಷ್ಣು ಸೋಲಂಕಿ
- Finance
ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ತಾರೆ ಅಮೂಲ್ಯ
ಚೆಲುವಿನ ಚಿತ್ತಾರದ ಚಿಲಿಪಿಲಿ ಬೆಡಗಿ ಅಮೂಲ್ಯ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಅವರ ಅಪಾರ ಅಭಿಮಾನಿ ಬಳಗಕ್ಕೆ ನಿರಾಶೆ ಮೂಡಿಸಿದ್ದಾರೆ. ಆದರೆ ಅಮೂಲ್ಯ ಮಾತ್ರ ತಮ್ಮ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಿಸಿಕೊಳ್ಳ ಅಂದಿದ್ದಾರೆ.
ಅಮೂಲ್ಯ ಅಭಿನಯದ 'ಮನಸಾಲಜಿ' ಚಿತ್ರವೇ ಆಕೆಯ ಕೊನೆಯ ಚಿತ್ರವಾಗಲಿದೆ. ಇದಾದ ಬಳಿಕ ಯಾವುದೇ ಚಿತ್ರದಲ್ಲಿ ನಟಿಸದಿರಲು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಚಿತ್ರರಂಗದ ಸಹವಾಸ ಸಾಕಪ್ಪಾ ಸಾಕು ಅನ್ನಿಸಿಬಿಟ್ಟಿದಿಯಂತೆ ಅಮೂಲ್ಯ ಅವರಿಗೆ.
ಚಿತ್ರ ನಿರ್ದೇಶಕ ರತ್ನಜ ಅವರೊಂದಿಗಿನ ಚುಂಬನ ವಿವಾದ ಆಕೆಯ ಮನಸ್ಸಿಗೆ ತೀವ್ರ ಘಾಸಿ ಮಾಡಿತ್ತು. ಆ ಆಘಾತದಿಂದ ಅಮೂಲ್ಯ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಈಗ ಮತ್ತೊಂದು ವಿವಾದ ಅಮೂಲ್ಯ ಮೇಲೆ ಬಂದೆರಗಿದೆ. ತಮಿಳು ಚಿತ್ರರಂಗದ ನಿರ್ಮಾಪರೊಬ್ಬರ ಮಗನೊಂದಿಗೆ ಮದುವೆಯಾಗಿದೆ ಎಂಬುದು.
ಶೂಟಿಂಗ್ ಸಮಯದಲ್ಲೇ ಇಬ್ಬರೂ ಕದ್ದುಮುಚ್ಚಿ ಲವ್ ಮಾಡುತ್ತಿದ್ದರು. ಅವರಿಬ್ಬರ ವಿವಾಹಕ್ಕೆ ಹೀರೋ ತಂದೆ ವಿರೋಧಿಸಿದ್ದರು. ಇಬ್ಬರೂ ಪೊಲೀಸ್ ಠಾಣೆಗೆ ಹೋಗಿ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯನ್ನು ಕೆಲವು ತಮಿಳು ಮಾಧ್ಯಮಗಳು ಪ್ರಕಟಿಸಿದ್ದವು. ಸುದ್ದಿಯ ಜೊತೆಗೆ ಅಮೂಲ್ಯ ಫೋಟೋವನ್ನು ಪ್ರಕಟಿಸಲಾಗಿತ್ತು.
ಇದರಿಂದ ಆಕೆ ತೀವ್ರ ನೊಂದುಕೊಂಡಿದ್ದಾರೆ. ತಮಿಳಿನ ಯಾವ ಚಿತ್ರದಲ್ಲೂ ನಾನು ನಟಿಸುತ್ತಿಲ್ಲ. ಹಾಗಿದ್ದೂ ಹೀಗೊಂದು ವದಂತಿ ಹಬ್ಬಿಸಲಾಗಿದೆ. ಕಾಲೇಜು ಆಯಿತು ಮನೆ ಆಯಿತು. ಇದಿಷ್ಟೇ ನನ್ನ ಕೆಲಸ. ಇನ್ನು ಮುಂದೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುತ್ತೇನೆ. ಸಿನಿಮಾ ಯಾವತ್ತಿದ್ದರೂ ಮಾಡಬಹುದು. ಆದರೆ ವಿದ್ಯಾಭ್ಯಾಸಕ್ಕೆ ನನ್ನ ಮೊದಲ ಆದ್ಯತೆ ಎಂದಿದ್ದಾರೆ ಅಮೂಲ್ಯ.