»   »  ಈ ವಾರ ವಿಶಿಷ್ಟ ಕಥಾಹಂದರದ 'ಬಳ್ಳಾರಿ ನಾಗ'

ಈ ವಾರ ವಿಶಿಷ್ಟ ಕಥಾಹಂದರದ 'ಬಳ್ಳಾರಿ ನಾಗ'

Subscribe to Filmibeat Kannada

ಬಿಂದುಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ಮಂಜು ನಿರ್ಮಿಸಿರುವ 'ಬಳ್ಳಾರಿ ನಾಗ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಾಹಸಸಿಂಹ ಡಾ.ವಿಷ್ಣುವರ್ಧನ್ ನಾಯಕನಾಗಿ ನಟಿಸಿರುವ ಈ ಚಿತ್ರ ವಿಶಿಷ್ಟ ಕಥಾಹಂದರ ಹೊಂದಿದ್ದು, ನೋಡುಗರ ಮನಸೂರೆಗೊಳ್ಳಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಡಾ.ವಿಷ್ಣುವರ್ಧನ್ ಅವರ "ಸುಪ್ರಭಾತ" ಸೇರಿದಂತೆ ಹಲವು ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್‌ಬಾಬು ಈ ಚಿತ್ರದ ನಿರ್ದೇಶಕರು. ನಿರ್ದೇಶನದೊಂದಿಗೆ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿರುವ ದಿನೇಶ್‌ಬಾಬು ಅವರು 'ಬಳ್ಳಾರಿ ನಾಗ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಹಾಗೂ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಧ್ವನಿಸುರುಳಿಗಳು ಕೇಳುಗರ ಮನ ಗೆದ್ದಿದೆ ಎಂದಿದ್ದಾರೆ.

ಎಲ್.ಎನ್.ಶಾಸ್ತ್ರಿ ಸಂಗೀತ ಸಂಯೋಜಿಸಿರುವ ಚಿತ್ರಕ್ಕೆ ಪಿ.ಆರ್.ಸೌಂದರ್‌ರಾಜನ್ ಅವರ ಸಂಕಲನವಿದೆ. ಪಳನಿರಾಜ್, ಪಂಬಲ್ ರವಿ ಸಾಹಸ ಹಾಗೂ ಮಸ್ತಾನ್ ನೃತ್ಯ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಡಾ.ವಿಷ್ಣುವರ್ಧನ್, ಮಾನಸಿ, ಅವಿನಾಶ್, ಚಿತ್ರಾಶೆಣೈ, ಶೋಭರಾಜ್, ರಮೇಶ್‌ಭಟ್, ಲಕ್ಷ್ಮೀಹೆಗ್ಡೆ, ರಾಜೇಶ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada