»   »  ಸುದೀಪ್ ನಟನೆ ಬಗ್ಗೆ ಅಮಿತಾಬ್ ಪ್ರಮಾಣ ಪತ್ರ!

ಸುದೀಪ್ ನಟನೆ ಬಗ್ಗೆ ಅಮಿತಾಬ್ ಪ್ರಮಾಣ ಪತ್ರ!

Posted By:
Subscribe to Filmibeat Kannada
Sudeep is good, no doubt : Amitabh Bachchan
ರಾಮ್ ಗೋಪಾಲ್ ವರ್ಮಾರ 'ರಣ್' ಚಿತ್ರದಲ್ಲಿ ಅಮಿತಾಬ್ ಜತೆ ಸುದೀಪ್ ನಟಿಸುತ್ತಿರುವುದು ಗೊತ್ತೇ ಇದೆ. ಸುದೀಪ್ ನಟನೆ ಬಗ್ಗೆ ಅಮಿತಾಬ್ ಬಚ್ಚನ್ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಸ್ವತಃ ಬಿಗ್ ಬಿ ತಮ್ಮ ನಟನೆಯನ್ನು ಮೆಚ್ಚಿರುವುದಕ್ಕೆ ಸುದೀಪ್ ಗೆ ಆಕಾಶದಲ್ಲಿ ತೇಲುವಷ್ಟು ಸಂತೋಷವಾಗಿದೆಯಂತೆ.

ಈ ಕುರಿತು ರಾಮ್ ಗೋಪಾಲ್ ವರ್ಮಾಗೆ ಅಮಿತಾಬ್ ಎಸ್ ಎಂ ಎಸ್ ರವಾನೆ ಮಾಡಿದ್ದಾರೆ. ಸಂದೇಶದಲ್ಲಿ, ''ಸುದೀಪ್ ರನ್ನು ನಾನು ಅಭಿನಂದಿಸುತ್ತೇನೆ. ಅವರೊಬ್ಬ ಉತ್ತಮ ನಟ. ಅದರಲ್ಲಿ ಎರಡು ಮಾತಿಲ್ಲ'' ಎಂದು ಅಮಿತಾಬ್ ಹೇಳಿದ್ದಾರಂತೆ. ತಮ್ಮ ಮೊಬೈಲ್ ಫೋನ್ ಗೆ ಬಂದಿದ್ದ ಸಂದೇಶವನ್ನು ಸುದೀಪ್ ಗೆ ರಾಮ್ ಗೋಪಾಲ್ ವರ್ಮಾತೋರಿಸಿದರಂತೆ. ಹಾಗಾಗಿ ಸುದೀಪ್ ಗೆ ಭೂಮಿ ಮೇಲೆ ನಿಲ್ಲದಷ್ಟು ಆನಂದವಾಗುತ್ತಿದೆಯಂತೆ.

ಆರೋಗ್ಯ ಸರಿಯಿಲ್ಲದ ಕಾರಣ ಮೊದಲ ದಿನದ ಚಿತ್ರೀಕರಣದಲ್ಲಿ ಸುದೀಪ್ ಗೆ ಭಾಗವಹಿಸಲು ಆಗಲಿಲ್ಲವಂತೆ. ಅವರು ಹಾಸಿಗೆ ಹಿಡಿದಿದ್ದನ್ನು ನೋಡಿ ರಾಮ್ ಗೋಪಾಲ್ ವರ್ಮಾ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ ನಂತರ ಮಧ್ಯಾಹ್ನದ ಹೊತ್ತಿಗೆ ಸರಿಹೋದರಂತೆ. ಕೆಲಸದ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ ಎಂದು ವರ್ಮಾ ಧೈರ್ಯ ತುಂಬಿದರಂತೆ. ಮಾರನೆ ದಿನ ಶೂಟಿಂಗ್ ಗೆ ತೆರಳಿದಾಗ ಇವರ ಆರೋಗ್ಯದ ಬಗ್ಗೆ ವಿಚಾರಿಸಿ ಏನೂ ಸಮಸ್ಯೆ ಇಲ್ಲ ಎಂದು ತಿಳಿದ ನಂತರವೇ ಆಕ್ಷನ್, ಕಟ್ ಹೇಳಲಾಯಿತಂತೆ. ಈ ಘಟನೆಗಳಿಂದ ಸುದೀಪ್ ಬೆರಗಾಗಿದ್ದಾರೆ. ಹಾಗಂತ ಅವರ ಆಪ್ತ ಸಹಾಯಕ ಸುರೇಶ್ ಹೇಳುತ್ತಾರೆ.

ಏಪ್ರಿಲ್ ಕೊನೆಯವರೆಗೂ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ನಂತರ ಫೂಂಕ್ ಭಾಗ 2 ಚಿತ್ರೀಕರಣ ಆರಂಭವಾಗಲಿದೆ. ಸುದೀಪ್ ಈಗ ಹೆಚ್ಚಾಗಿ ಮುಂಬೈನಲ್ಲೇ ಕಳೆಯಬೇಕಾಗಿದೆ. ಹಾಗಾಗಿ ಅಲ್ಲೇ ಫ್ಲಾಟ್ ಒಂದನ್ನು ಕೊಂಡುಕೊಳ್ಳಲು ತೀರ್ಮಾನಿಸಿದ್ದಾರೆ. ಒಟ್ಟಿನಲ್ಲಿ ಸುದೀಪ್ ನಟನೆ ಬಗ್ಗೆ ಬಿಗ್ ಬಿ ಪ್ರಮಾಣ ಪತ್ರ ಕೊಟ್ಟು ಅವರ ಜವಾಬ್ದಾರಿಯನ್ನು ಮತ್ತ್ತಷ್ಟು ಹೆಚ್ಚಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ವರ್ಮಾರ ಫೂಂಕ್ ಭಾಗ 2ರಲ್ಲಿ ಸುದೀಪ್
ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?
ಬಚ್ಚನ್ ಮಗನಾಗಿ ಹಿಂದಿ ಚಿತ್ರದಲ್ಲಿ ಕಿಚ್ಚ ಸುದೀಪ್
ಸುದೀಪ್ ಅಭಿನಯದ ಫೂಂಕ್ ಚಿತ್ರದ ಟ್ರೇಲರ್
ರಾಮ್ ಗೋಪಾಲ್ ವರ್ಮ ಚಿತ್ರದಲ್ಲಿ ಸುದೀಪ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada