»   » ರಜನಿಕಾಂತ್ ಮಗಳಿಗೆ ಕೂಡಿಬಂತು ಕಂಕಣ

ರಜನಿಕಾಂತ್ ಮಗಳಿಗೆ ಕೂಡಿಬಂತು ಕಂಕಣ

Subscribe to Filmibeat Kannada

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ಗೆ ಕಂಕಣಬಲ ಕೂಡಿಬಂದಿದೆ. ಫೆಬ್ರವರಿ 14, 2010ರ 'ಪ್ರೇಮಿಗಳ ದಿನ'ದಂದು ನಿಶ್ಚಿತಾರ್ಥ ನಡೆಯಲಿದೆ. ಇದು ಹಿರಿಯರು ನಿರ್ಧರಿಸಿದ ಪ್ರೇಮ ವಿವಾಹ ಎನ್ನುತ್ತವೆ ತಮಿಳು ಚಿತ್ರರಂಗದ ಮೂಲಗಳು.

ರಜನಿಕಾಂತ್ ಭಾವಿ ಅಳಿಯನ ಹೆಸರು ಅಶ್ವಿನ್ ಕುಮಾರ್. ಈತ ರಿಯಲ್ ಎಸ್ಟೇಟ್ ನ ಪ್ರಭಾವಿ ಉದ್ಯಮಿ ರಾಮ್ ಕುಮಾರ್ ಅವರ ಮಗ. ನಿಶ್ಚಿತಾರ್ಥ ಮುಗಿದ ಬಳಿಕ ಕೆಲವು ತಿಂಗಳಲ್ಲೇಸೌಂದರ್ಯ ಮತ್ತು ಅಶ್ವಿನ್ ಕುಮಾರ್ ಹಸೆಮಣೆ ಏರಲಿದ್ದಾರೆ. ರಜನಿಕಾಂತ್ ಅವರ ಕನಸಿನ ಚಿತ್ರ 'ಸುಲ್ತಾನ್' ಮುಗಿದ ಬಳಿಕವೇ ಸೌಂದರ್ಯ ಸಪ್ತಪದಿ ತುಳಿಯುವುದು.

ಅಶ್ವಿನ್ ಕುಮಾರ್ ಹಾಗೂ ಸೌಂದರ್ಯ ಒಬ್ಬರನ್ನ್ನೊಬ್ಬರು ಇಷ್ಟಪಟ್ಟಿದ್ದರು. ಇದೀಗ ಇವರ ಪ್ರೇಮ ವಿವಾಹಕ್ಕೆ ಎರಡೂ ಕುಟುಂಬಗಳು ಗ್ರೀನ್ ಸಿಗ್ನಲ್ ನೀಡಿವೆ. ಸದ್ಯಕ್ಕೆ ಈಗ 'ಗೋವಾ' ಎಂಬ ಚಿತ್ರದ ನಿರ್ಮಾಣೇತರ ಕೆಲಸಗಳಲ್ಲಿ ಸೌಂದರ್ಯ ಬ್ಯುಜಿಯಾಗಿದ್ದಾರೆ. ಇವೆಲ್ಲಾ ಮುಗಿದ ಬಳಿಕವಷ್ಟೇ ಗಟ್ಟಿಮೇಳ ಮೊಳಗಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada