twitter
    For Quick Alerts
    ALLOW NOTIFICATIONS  
    For Daily Alerts

    ನಮ್ಮಣ್ಣ ಡಾನ್‌ ರಮೇಶ್‌ಗೆ ಲಂಡನ್‌ನಲ್ಲಿ ಸನ್ಮಾನ

    By Rajendra
    |

    ಸುಂದರ ಸ್ವಪ್ನಗಳು (1986) ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ರಮೇಶ್ ಅರವಿಂದ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಪ್ಪತ್ತೈದು ವರ್ಷಗಳಾಗಿವೆ. ಅವರ ಅಭಿನಯದ 'ಪಂಚಮವೇದ' ಚಿತ್ರ 150 ದಿನ ಪೂರೈಸಿತ್ತು. 'ಓ ಮಲ್ಲಿಗೆ' ಚಿತ್ರವಂತೂ ಸತತ ಒಂದು ವರ್ಷ ಪ್ರದರ್ಶನ ಕಂಡಿತ್ತು. ಹೀಗೆ ಅವರ 25 ವರ್ಷಗಳ ಸಿನಿ ಜೀವನದಲ್ಲಿ ಸಾಕಷ್ಟು ದಾಖಲೆಗಳು ಕಾಣಸಿಗುತ್ತವೆ.

    ರಮೇಶ್ ಅರವಿಂದ್ ಅಭಿನಯದ 'ನಮ್ಮಣ್ಣ ಡಾನ್' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಮಾತಿನ ಜೋಡಣೆಯೂ ಪೂರ್ಣವಾಗಿದೆ. ಈ ಸುಸಂದರ್ಭದಲ್ಲಿ ಲಂಡನ್ ಖ್ಯಾತ ಸಂಸ್ಥೆಯೊಂದು ರಮೇಶ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಆತ್ಮೀಯ ಸನ್ಮಾನವನ್ನು ಸ್ವೀಕರಿಸಲು ರಮೇಶ್ ಲಂಡನ್‌ಗೆ ತೆರೆಳಿದ್ದಾರೆ.

    ಹಾಸ್ಯ ಪ್ರಧಾನ ಈ ಚಿತ್ರದ ನಿರ್ದೇಶನವನ್ನೂ ರಮೇಶ್ ಅವರೇ ಮಾಡುತ್ತಿದ್ದಾರೆ. ಮೋನಾಪರವರೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ 'ನಮ್ಮಣ್ಣ ಡಾನ್'ಗೆ ಭಾಸ್ಕರ್ ಅವರ ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೆಶ್‌ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)

    English summary
    The most versatile actor of Kannada films Ramesh Aravind is completed 25 years in Kannada film industry. He will be honoured in London. He will be leaving for London on the occasion. At present he is busy in Nammanna Don movie.
    Tuesday, November 8, 2011, 11:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X