»   » ಚಿತ್ರನಟ ಸೃಜನ್ ಲೋಕೇಶ್ ಮದುವೆ

ಚಿತ್ರನಟ ಸೃಜನ್ ಲೋಕೇಶ್ ಮದುವೆ

Posted By:
Subscribe to Filmibeat Kannada

ದಿವಂಗತ ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ ಹಾಗೂ ನಟ ಲೋಕೇಶ್ ಅವರ ಮಗ ಸೃಜನ್ ಲೋಕೇಶ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಸೋಮವಾರ(ಫೆ.8) ಬೆಳಗ್ಗೆ ಶುಭ ಮುಹೂರ್ತದಲ್ಲಿ ಸೃಜನ್ ಲೋಕೇಶ್ ಮತ್ತು ಕಿರುತೆರೆ ನಟಿ ಗ್ರೀಷ್ಮಾ ನೂತನ ದಾಂಪತ್ಯಕ್ಕೆ ಅಡಿಯಿಟ್ಟರು.

'ನೀಲ ಮೇಘ ಶಾಮ' ಚಿತ್ರದ ಮೂಲಕ ಸೃಜನ್ ಲೋಕೇಶ್ ಕನ್ನಡ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ದರ್ಶನ್ ಜೊತೆ ಅಭಿನಯಿಸಿರುವ 'ಪೊರ್ಕಿ' ಚಿತ್ರ ಇದೀಗ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಸ್ತುತ ಸೃಜನ್ ಮತ್ತು ಗ್ರೀಷ್ಮಾ ಇಬ್ಬರೂ ಕಿರುತೆರೆಯಲ್ಲಿ ಮಿನುಗುತ್ತಿರುವ ತಾರೆಗಳು.

ಸೃಜನ್ ಮದುವೆ ಸಂಭ್ರಮಕ್ಕೆ ಅವರ ತಾಯಿ ಗಿರಿಜಾ ಲೋಕೇಶ್ ಸೇರಿಂದಂತೆ ಉಪೇಂದ್ರ ಮತ್ತು ಪ್ರಿಯಾಂಕಾ, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನೋದ್, ಜಗ್ಗೇಶ್, ಜಯಂತಿ ಮತ್ತ್ತು ರಮೇಶ್ ಭಟ್ ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆಯ ಕಲಾವಿದರು ಆಗಮಿಸಿದ್ದರು.

ಬೆಂಗಳೂರಿನ ಬೆಸ್ಟ್ ಕ್ಲಬ್ ಕ್ರೇಜಿ ಪಾರ್ಕ್ ನಲ್ಲಿ ಸೃಜನ್ ಮತ್ತು ಗ್ರೀಷ್ಮಾ ಅವರ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಎಂ ಎನ್ ಲಕ್ಷ್ಮಿದೇವಿ, ಬಿವಿ ರಾಧಾ, ರಾಮಕೃಷ್ಣ ಕುಟುಂಬ, ವಿ ಮನೋಹರ್ ಕುಟುಂಬ, ಬರಗೂರು ರಾಮಚಂದ್ರಪ್ಪ, ಹೇಮಾ ಚೌದರಿ, ಶ್ರೀನಿವಾಸಮೂರ್ತಿ, ನವೀನ್ ಕೃಷ್ಣ, ಮಾಸ್ಟರ್ ಆನಂದ್, ರಮೇಶ್ ಅರವಿಂದ್, ಸಿ ಆರ್ ಸಿಂಹ, ಮಯೂರ್ ಪಟೇಲ್, ಬಿ ಜಯಶ್ರೀ, ಪೂಜಾಗಾಂಧಿ, ರಾಧಿಕಾಗಾಂಧಿ, ವನಿತಾ ವಾಸು, ದಿಲೀಪ್ ರಾಜ್, ಅರ್ಚನಾ ಉಡುಪ, ಕೀರ್ತಿರಾಜ್, ಧರ್ಮ ಕೀರ್ತಿರಾಜ್, ದೊಡ್ಡಣ್ಣ ಸೇರಿದಂತೆ ಹಲವರು ನೂತನ ದಂಪತಿಗಳನ್ನು ಹಾರೈಸಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada