»   »  ಅಂಧ ಬಾಲಕಿಯನ್ನು ದತ್ತು ತೆಗೆದುಕೊಂಡ ಶ್ರುತಿ

ಅಂಧ ಬಾಲಕಿಯನ್ನು ದತ್ತು ತೆಗೆದುಕೊಂಡ ಶ್ರುತಿ

Posted By:
Subscribe to Filmibeat Kannada
Actress Shruthi
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಹಾಗೂ ನಟಿ ಶ್ರುತಿ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಮಗುವಿಗೂ ತಾವು ಮದುವೆಯಾಗಲಿರುವ ಚಂದ್ರಚೂಡ್ ಗೂ ಯಾವುದೇ ಸಂಬಂಧ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಮೂರನೇ ತರಗತಿಯಲ್ಲಿ ಓದುತ್ತಿರುವ ಅಂಧ ಬಾಲಕಿ ವಿನುತಾಗೆ ಹೊಸ ಅಮ್ಮ ಸಿಕ್ಕಂತಾಗಿದೆ.

ಬೆಂಗಳೂರು ಜಯನಗರದ ರಮಣಶ್ರೀ ಆಶ್ರದಲ್ಲಿನ ಸಂಬಂಧ ಪಟ್ಟ ದಾಖಲೆಗಳಿಗೆ ಜೂನ್ 6ರಂದು ಸಹಿ ಹಾಕಿ ಮಗುವನ್ನು ತನ್ನದಾಗಿಸಿಕೊಂಡರು. ಶ್ರುತಿ ಮತ್ತು ಮಗಳು ಗೌರಿ ಹುಟ್ಟುಹಬ್ಬದ ದಿನವೇ ಅವರು ಈ ಮಗುವನ್ನು ದತ್ತು ತೆಗೆದುಕೊಂಡಿರುವುದು ವಿಶೇಷ. ಅಂಧ ಮಕ್ಕಳೊಂದಿಗೆ ಗೌರಿ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡರು.

ಇದೇ ಸಂದರ್ಭದಲ್ಲಿ ರಮಣಶ್ರೀ ಆಶ್ರಮಕ್ಕೆ ಶ್ರುತಿ ದಾನವಾಗಿ 10800 ರು.ಗಳನ್ನು ಕೊಟ್ಟರು. ಶ್ರುತಿ ಈ ಕುರಿತು ಮಾತನಾಡುತ್ತಾ, ದತ್ತು ತೆಗೆದುಕೊಂಡಿರುವ ಮಗುವಿನ ಸಮಸ್ತ ಜವಾಬ್ದಾರಿಯನ್ನು ತಾನು ಹೊತ್ತಿರುವುದಾಗಿ ತಿಳಿಸಿದ್ದಾರೆ. ವಿನುತಾರನ್ನು ನನ್ನ ಮಗಳು ಗೌರಿಯನ್ನು ಬೆಳೆಸಿದಂತೆಯೇ ಬೆಳೆಸುತ್ತೇನೆ ಎಂದರು.

ಏತನ್ಮಧ್ಯೆ ಶ್ರುತಿ ಅವರು ಮಹಿಳೆಯರ ಅಭಿವೃದ್ಧಿ ಕಡೆಗೆ ಗಮನಹರಿಸಿದ್ದು, 'ದೇವದಾಸಿ'ಯರಿಗಾಗಿ 5000 ಮನೆಗಳನ್ನು ನಿರ್ಮಿಸುವ ಫಣ ತೊಟ್ಟಿದ್ದಾರೆ. 'ದೇವದಾಸಿ'ಯರಿಗೆ ಗೌರವಯುತವಾದ ಹೊಸ ಹೆಸರೊಂದನ್ನು ಕೊಡಬೇಕು ಎಂಬುದು ಅವರ ಸದ್ಯದ ಹೋರಾಟ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada