For Quick Alerts
  ALLOW NOTIFICATIONS  
  For Daily Alerts

  ಬಿರಾದರ್ ಗೆ ಇಂಟರ್ ನ್ಯಾಷನಲ್ ಪ್ರಶಸ್ತಿ

  By Mahesh
  |

  'ಕನಸೆಂಬೋ ಕುದುರೆಯನೇರಿ' ಹೊರಟ ಬಿರಾದರ್ ಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಬಿಕ್ಷುಕನ ಪಾತ್ರಕ್ಕೆ ಸೀಮಿತವಾಗಿದ್ದ ವೈಜನಾಥ್ ಬಿರಾದರ್ ಅವರನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಾಯಕನಾಗಿ ಮಾಡಿದ್ದು ಸಾರ್ಥಕವಾಗಿದೆ. ಕನಸೆಂಬೋ ಕುದುರೆಯನೇರಿ ಚಿತ್ರದ ನಟನೆಗೆ ಸ್ಪೇನ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗೋಲ್ಡನ್ ವ್ಹೀಲ್ ಪ್ರಶಸ್ತಿ ಸಿಕ್ಕಿದೆ.

  'ಕನಸೆಂಬೋ ಕುದುರೆಯನೇರಿ' ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ ಚಿತ್ರ. 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ 'ಕನಸೆಂಬ ಕುದುರೆಯನೇರಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಬಸಂತ್ ಕುಮಾರ್ ಪಾಟೀಲ ನಿರ್ಮಾಣದ ಈ ಚಿತ್ರದಲ್ಲಿ ವೈಜಯಂತ್ ಬಿರಾದರ್ ಹಾಗೂ ಉಮಾಶ್ರೀ ಮುಖ್ಯಭೂಮಿಕೆಯಲ್ಲಿದ್ದಾರೆ.

  ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ನಡೆದ ಇಮ್ಯಾಜಿನ್ ಇಂಡಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟನಿಗೆ ಸಿಗುವ "ಗೋಲ್ಡನ್ ವೀಲ್" ಪ್ರಶಸ್ತಿ ಬಿರಾದರ್ ಗೆ ಲಭಿಸಿದೆ. 70 ರ ದಶಕದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಗೆ ದಿವಂಗತ ಶಂಕರ್ ನಾಗ್ ಅವರಿಗೆ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು.

  ಅದೇ ರೀತಿ ಗುಲಾಬಿ ಟಾಕೀಸ್ ಅಭಿನಯಕ್ಕೆ ಉಮಾಶ್ರೀ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಆದರೆ, ಇವೆರಡು ಪ್ರಶಸ್ತಿಗಳು ಭಾರತದಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆದ ಸಿಕ್ಕಿದ್ದು, ಬಿರಾದಾರ್ ಗೆ ವಿದೇಶದಲ್ಲಿ ನಡೆಯುತ್ತಿರುವ ಚಿತ್ರೋತ್ಸವದಲ್ಲಿ ಸಿಕ್ಕಿರುವುದು ವಿಶೇಷವೇ ಸರಿ.

  57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಬಿರಾದಾರ್ ಗೆ ನಿರಾಶೆಯಾಗಿತ್ತು. ರಾಜ್ಯ ಸರ್ಕಾರದ ಪ್ರಶಸ್ತಿ ಲಭಿಸುವ ಆಸೆ ಇನ್ನೂ ಜೀವಂತವಾಗಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿರಾದಾರ್ ಹೆಸರು ಹರಿದಾಡುತ್ತಿದೆ.

  English summary
  Vaijyanath Biradar gets the international acclaim for his Yeeraiah role in Directors Girish Kasaravalli’s ‘Kanasembo Kudureyaneri’. Biradar bags Golden Wheel award in Imagine India International Film Festival held in Madrid, Spain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X