»   »  ತೆರೆಗೆ ಅಪ್ಪಳಿಸಲಿರುವ ನಾಲಕ್ಕು ಚಿತ್ರ

ತೆರೆಗೆ ಅಪ್ಪಳಿಸಲಿರುವ ನಾಲಕ್ಕು ಚಿತ್ರ

Subscribe to Filmibeat Kannada
ವಾರಕ್ಕೆ ಒಂದು ಕನ್ನಡ ಚಿತ್ರ ನೋಡದಿದ್ದರೆ ಏನೋ ಒಂದು ಬಗೆಯ ತಳಮಳ ತಾಕಿಸಿಕೊಳ್ಳುವ ಕನ್ನಡ ಜನ ಈಗಲೂ ನಮ್ಮ ನಡುವೆ ಇದ್ದಾರೆ. ಜಾಸ್ತಿ ಶಿಕ್ಷಣ ಪಡೆಯದ ಮಧ್ಯಮವರ್ಗ, ಲೋಯರ್ ಸೆಂಕಡರಿವರೆಗೆ ಕಲಿತ ಕೆಳಮಧ್ಯಮ ವರ್ಗದವರೆ ಹೆಚ್ಚಾಗಿರುವ ಈ ವಲಯದಿಂದಲೇ ಕನ್ನಡ ಚಿತ್ರೋದ್ಯಮ ಉಸಿರು ಹಿಡಿದುಕೊಂಡಿದೆ ಎಂದರೆ ಏನೇನೂ ಅತಿಶಯೋಕ್ತಿ ಆಗುವುದಿಲ್ಲ.

ಇಂಥ ಕನ್ನಡ ಕುಲಬಾಂಧವರಿಗೆ ನಾಳೆ ಶುಕ್ರವಾರ ಒಂದು ಸವಾಲು. ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಚಿತ್ರಗಳು ತೆರೆಮೇಲೆ ಹೊಡೆದು ಅಪ್ಪಳಿಸಲಿದೆ. ಯಾವುದನ್ನು ನೋಡುವುದು ಯಾವುದನ್ನು ಬಿಡುವುದು. ಕಷ್ಟ ಕಷ್ಟ. ಸಿನಿಮಾ ಟಿಕೆಟ್ 30 ರಿಂದ 50 ರೂಪಾಯಿ, ಬಿಟಿಎಸ್ ಬಸ್ ಛಾರ್ಜು 18 ರೂಪಾಯಿ, ಒಂದು ರವೆ ಇಡ್ಲಿ 16 ರೂಪಾಯಿ. ಕಾಫಿ 6 ರೂಪಾಯಿ.

ನೂರು ರೂಪಾಯಿ ನೋಟನ್ನು ನುಚ್ಚು ನೂರು ಮಾಡುವ ವಾರದ ಮನರಂಜನೆಯ ಸವಾಲನ್ನು ಸ್ವೀಕರಿಸಿ ಚಿತ್ರಮಂದಿರಗಳತ್ತ ಧಾವಿಸುವವರಿಗೆ ತೆರೆಕಾಣಲಿರುವ ನಾಲಕ್ಕು ಚಿತ್ರಗಳ ಕಿರು ಪರಿಚಯ ಇಲ್ಲಿದೆ. ಕನ್ನಡ ಓದಿರಿ, ಕನ್ನಡ ಚಿತ್ರಗಳನ್ನು ಬೆಂಬಲಿಸಿ !


1) ಕೆಂಪ
ನಿರ್ಮಾಪಕ: ಆನೇಕಲ್ ಬಾಲರಾಜ್
ನಿರ್ದೇಶಕ : ಜಗದೀಶ್
ಸಂಗೀತ: ಗುರುಕಿರಣ್
ತಾರಾಗಣ: ಸಂತೋಷ್

(ವೀರಪ್ಪನ್ ಯುಗದಲ್ಲಿ ಕರ್ನಾಟಕ ಪೊಲೀಸರು ಮತ್ತು ಬಿಎಸ್ ಎಫ್ ಯೋಧರು ತಮಿಳುನಾಡಿನ ಗೋಪಿನಾಥಂಗೆ ದಾಳಿಯಿಟ್ಟಿದ್ದರು. ಅದು ಇತಿಹಾಸ. ಅಲ್ಲಿನ ಸ್ಥಳೀಯರ ಮೇಲೆ ಸಮವಸ್ತ್ರಧಾರಿಗಳು ದೌರ್ಜನ್ಯ ಎಸಗಿದರು ಎಂಬ ಆರೋಪ ಕೇಳಿಬಂದಿತ್ತು. ವಿಚಾರಣೆಗಳೂ ನಡೆದವು. ಆ ಘಟನೆಗಳನ್ನು ತೆರೆಯ ಮೇಲೆ ಮೆಲಕುಹಾಕುವ ಪ್ರಯತ್ನವೇ ಈ ಚಿತ್ರದ ಕಥಾ ಹಂದರ. ಮೊದಲು ಹಿಂದೆಮುಂದೆ ನೋಡಿದ ಸೆನ್ಸಾರ್ ಮಂಡಳಿಯವರು ಆನಂತರ ಈ ಚಿತ್ರಕ್ಕೆ UA ಪ್ರಮಾಣಪತ್ರ ನೀಡಿದ್ದಾರೆ.)

2) ಅನು
ನಿರ್ಮಾಪಕ: ಬಾಲು
ನಿರ್ದೇಶಕ : ಶಿವಗಣಪತಿ
ಸಂಗೀತ: ಶೇಖರ್ ಚಂದ್ರ
ತಾರಾಗಣ: ಪೂಜಾ ಗಾಂಧಿ, ರಶ್ಮಿ

(ತೆಲುಗಿನ ಅನಸೂಯಾ ಚಿತ್ರದ ಕನ್ನಡ ಅವತರಿಣಿಕೆ. ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಅಪರಾಧ ಪ್ರಪಂಚವನ್ನು ರುಬ್ಬುವ ತೆಲುಗಿನ ಸೂಪರ್ ಹಿಟ್ ಚಿತ್ರ. ಭೂಮಿಕಾ ಅಭಿನಯದ ನಾಯಕಿ ಪ್ರಧಾನ ಚಿತ್ರ. ಒಂದು ಟ್ರ್ಯಾಕ್ ನಲ್ಲಿ ಲವ್ವು ಇನ್ನೊಂದು ಟ್ರ್ಯಾಕ್ ನಲ್ಲಿ ಕ್ರೈಂ. ಅದೇ ಚಿತ್ರದ ಮಸಾಲಾ.)

3) ಚಿಕ್ಕಪೇಟೆ ಸಾಚಾಗಳು
ನಿರ್ಮಾಪಕ: ಎಸ್. ನಾರಾಯಣ್
ನಿರ್ದೇಶಕ : ನಾಗೇಂದ್ರ ಮಾಗಡಿ
ಸಂಗೀತ: ಎಸ್. ನಾರಾಯಣ್
ತಾರಾಗಣ: ಎಸ್. ನಾರಾಯಣ್, ಜಗ್ಗೇಶ್

( ನೋ ಕಾಮೆಂಟ್ಸ್ )

4) ಟ್ಯಾಕ್ಸಿ ನಂಬರ್ 1
ನಿರ್ಮಾಪಕ: ಗೀತ
ನಿರ್ದೇಶಕ : ಪ್ರಭಾಕರ್
ಸಂಗೀತ: ನಟರಾಜ್ ಕನಗೋಡ
ಛಾಯಾಗ್ರಾಹಣ: ಗೌರಿ ವೆಂಕಟೇಶ್
ತಾರಾಗಣ: ಪ್ರಭಾಕರ್, ನಿಕಿತಾ ರಾವ್, ಗೀತಾ, ವಿಜಯಕಾಶಿ

(ಈ ಚಿತ್ರದ ನಿರ್ದೇಶಕರು ಮುಂಚೆ ಆಟೋ ಓಡಿಸುತ್ತಿದ್ದರಂತೆ. ಆ ದಿನಗಳ ಅನುಭವಗಳನ್ನು ಹಿಡಿಹಿಡಿಯಾಗಿ ಕಟ್ಟಿಕೊಡುವ ಸೆಲ್ಯುಲ್ಯಾಡ್ ಪ್ರಯತ್ನವೇ ಟ್ಯಾಕ್ಸಿ ನಂಬರ್ 1)

(ದಟ್ಸ್ ಕನ್ನಡ ಚಿತ್ರವಾರ್ತೆ)

ವಿಶಿಷ್ಟ ಕಥೆಯುಳ್ಳ ಅನು ಚಿತ್ರಕ್ಕೆ ಸೆನ್ಸಾರ್ ಪೂರ್ಣ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada