»   » ಸಪ್ತಸ್ವರಗಳಲ್ಲಿ ಮಿಡಿಯಲಿದೆ 'ಕಾಲ್ಗೆಜ್ಜೆ'

ಸಪ್ತಸ್ವರಗಳಲ್ಲಿ ಮಿಡಿಯಲಿದೆ 'ಕಾಲ್ಗೆಜ್ಜೆ'

Subscribe to Filmibeat Kannada

ಜೀವನದಲ್ಲಿ ಗೆದ್ದರೆ ಪ್ರೀತಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಇದು 'ಕಾಲ್ಗೆಜ್ಜೆ' ಚಿತ್ರದ ಥೀಮ್. ಎಸ್. ಬಂಗಾರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಕಳೆದ 4 ರಿಂದ ಪ್ರಾರಂಭವಾಗಿದೆ. ಬಾಕಿ ಉಳಿದ ಎರಡು ಹಾಡುಗಳು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ಸುಮಾರು 12 ದಿನಗಳ ಕಾಲ ನಡೆಸಲಾಗುವುದು.

ಸುಂದರ ಪ್ರೇಮಕಥೆಯೊಂದನ್ನು ಸಂಗೀತದ ಸಪ್ತ ಸ್ವರಗಳ ಮೂಲಕ ಹೇಳ ಹೊರಟಿದ್ದಾರೆ, ನಿರ್ದೇಶಕ ಎಸ್. ಬಂಗಾರು. ಉದ್ಯಮಿ ನಾಗಭೂಷಣ್ ಬಹಳ ಇಷ್ಟಪಟ್ಟು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಕುಂದಾಪುರ, ಮೇಲುಕೋಟೆ, ಬಾಬಾಬುಡನ್‌ಗಿರಿ ಬೆಟ್ಟ, ಭದ್ರಾವತಿ, ಕೆಮ್ಮಣ್ಣುಗುಂಡಿ, ಮೊದಲಾದ ಕಡೆಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣದ ಜೊತೆಗೆ ಸಂಕಲನ ಕಾರ್ಯವೂ ಯಶಸ್ವಿಯಾಗಿ ಸಾಗುತ್ತಿದೆ.

ಗಂಧರ್ವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ, ವೀನಸ್ ಮೂರ್ತಿಯವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರದ ನಾಯಕಿಯಾಗಿ ರೂಪಿಣಿ, ನಾಯಕನಾಗಿ ವಿಶ್ವಾಸ್ ಅಭಿನಯಿಸುತ್ತಿದ್ದು, ರಂಗಾಯಣರಘು, ಪವಿತ್ರ ಲೋಕೇಶ್, ತಬಲ ನಾಣಿ, ಶರಣ್ ಅಲ್ಲದೇ, ಸಂಗೀತ ನಿರ್ದೇಶಕ ವಿ. ಮನೋಹರ್ ಹಾಗೂ ನಿರ್ದೇಶಕ ಎಸ್. ಮಹೇಂದರ್ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada