twitter
    For Quick Alerts
    ALLOW NOTIFICATIONS  
    For Daily Alerts

    ದಯವಿಟ್ಟು ಪುಟ್ಟಣ್ಣ ಕಣಗಾಲ್ ಥೇಟರ್ ರೀ ಓಪನ್ ಮಾಡಿ

    By * ನಾಗರೀಕ ಸಮಿತಿ, ಬೆಂಗಳೂರು
    |

    Puttanna Kanagal Theater,Jayanagar
    ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಜಯನಗರದಲ್ಲಿ ಸ್ಥಾಪಿಸಲಾದ ಪುಟ್ಟಣ್ಣ ಥಿಯೇಟರ್ ಇಂದು ಅವಸಾನದ ಅಂಚಿನಲ್ಲಿದೆ. ಇದು ಕನ್ನಡಿಗರ ದೌರ್ಭಾಗ್ಯ. ನವೀಕರಣದ ಹೆಸರಿನಲ್ಲಿ ವರ್ಷಗಳ ಹಿಂದೆ ಬಾಗಿಲು ಮುಚ್ಚಿದ ಈ ಥಿಯೇಟರ್ ಇಲ್ಲಿಯವರೆಗೂ ಪುನರಾರಂಭ ಆಗಿಲ್ಲ. ಇಂಥ ಸ್ಥಿತಿಗೆ ಬಿಬಿಎಂಪಿ ಹಾಗೂ ಸರ್ಕಾರವೇ ನೇರ ಹೊಣೆ ಹೊರಬೇಕು.

    ಪುಟ್ಟಣ್ಣ ಥಿಯೇಟರ್ ಇರುವ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅತ್ಯಂತ ಜನನಿಬಿಡ ಪ್ರದೇಶ. ಪ್ರಮುಖ ವಾಣಿಜ್ಯ ಕೇಂದ್ರ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ತಾಣ. ಅಷ್ಟು ಮಾತ್ರವಲ್ಲದೆ ಹಳೇ ಬೆಂಗಳೂರಿಗರ ಭಾವನಾತ್ಮಕ ಸಂಬಂಧದ ಕೊಂಡಿಯೂ ಹೌದು. ಇಂಥ ಆಯಕಟ್ಟಿನ ಜಾಗದಲ್ಲಿರುವ ಪುಟ್ಟಣ್ಣ ಥಿಯೇಟರ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದು ಯಾರಿಗಾದರೂ ಬೇಸರ ತರಿಸುವ ಸಂಗತಿ.

    ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಾಣಿಜ್ಯ ವ್ಯವಹಾರಗಳಂತೆ ಸಿನಿಮಾ ಮಂದಿರಗಳ ಸ್ವರೂಪಗಳೂ ಬದಲಾಗುತ್ತಿವೆ. 30-40 ರೂ.ಗಳಲ್ಲಿ ಸಿನಿಮಾ ನೋಡಬಹುದಾಗಿದ್ದ ಥಿಯೇಟರ್‌ಗಳ ಜಾಗದಲ್ಲಿ ನೂರಾರು ರೂಪಾಯಿ ಕೊಟ್ಟು ನೋಡಬೇಕಾದ ಮಲ್ಟಿಪ್ಲೆಕ್ಸ್‌ಗಳು ತಲೆಯೆತ್ತಿ ನಿಂತಿವೆ. ಪುಟ್ಟಣ್ಣ ಥಿಯೇಟರ್ ಕೂಡ ಈ ಸಾಲಿಗೆ ಸೇರಬಹುದೇನೋ?

    ಕನ್ನಡ ಚಿತ್ರ ನೋಡುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೊಬ್ಬಿಡುತ್ತಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಕಡಿಮೆ ದರದಲ್ಲಿ ಗುಣಮಟ್ಟದ ಸಿನಿಮಾ ನೋಡಬಹುದಾದ ಪುಟ್ಟಣ್ಣ ಥಿಯೇಟರ್ ಪುನರಾರಂಭಿಸಲು ಆಸಕ್ತಿ ತೋರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುವ ಥಿಯೇಟರ್‌ಗಳು ಒಂದೊಂದಾಗಿ ಮುಚ್ಚುತ್ತಾ ಹೋದರೆ ಕನ್ನಡ ಸಿನಿಮಾ ನೋಡುವುದಾದರೂ ಹೇಗೆ?

    ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಿ ಅವರನ್ನು ಹೊಗಳುವ ಸರ್ಕಾರ ಅವರ ಹೆಸರಿನಲ್ಲಿರುವ ಥಿಯೇಟರ್ ಕಣ್ಣೆದುರೇ ಅವಸಾನಗೊಳ್ಳುತ್ತಿದ್ದರೂ ನಿರ್ಲಕ್ಷ್ಯ ತೋರುವುದು ಖಂಡನಾರ್ಹ.

    ನಾಗರಿಕರ ಆಶಯದಂತೆ ಪುಟ್ಟಣ್ಣ ಥಿಯೇಟರನ್ನು ನವೀಕರಿಸಿ ತಕ್ಷಣವೇ ಪ್ರದರ್ಶನಕ್ಕೆ ಸಿದ್ಧಪಡಿಸಲು ಬಿಬಿಎಂಪಿ ಮತ್ತು ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಅದು ಪುಟ್ಟಣ್ಣನವರಿಗೆ ಮಾಡುವ ಅವಮಾನ. ಈ ಹಿನ್ನೆಲೆಯಲ್ಲಿ ಪುಟ್ಟಣ್ಣ ಥಿಯೇಟರ್‌ನ್ನು ನವೀಕರಿಸಬೇಕೆಂದು ಆಗ್ರಹಿಸಿ ನಾಗರೀಕರಿಂದ ಸಹಿ ಸಂಗ್ರಹ ಚಳವಳಿ ಮಾಡಲಾಗುತ್ತದೆ.ಇತ್ತೀಚೆಗೆ ವೆಂಕಟಪ್ಪ ಕಲಾ ಮಂದಿರದಲ್ಲಿ ಪುಟ್ಟಣ್ಣ ಅವರ ಜೀವನ ಚಿತ್ರ ಪ್ರದರ್ಶನ ಜನಮೆಚ್ಚುಗೆ ಗಳಿಸಿದೆ. ಅಲ್ಲಿಗೆ ಭೇಟಿ ನೀಡಿದ ಹಲವರು ಪುಟ್ಟಣ್ಣ ಅವರ ಬಗ್ಗೆ ಸರ್ಕಾರ ತೋರುತ್ತಿರುವ ಉದಾಸೀನತೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

    English summary
    BBMP has to revamp and reopen the iconic Puttanna Kanagal Theater in Jayanagar BDA complex. We have already lost many theaters in Bangalore South. Watching movies in Multiplex is considered as decline of film culture in this area. Citizen forum urge government take necessary action at the earliest.
    Friday, July 8, 2011, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X