»   » ರಮ್ಯಾ ಜೊತೆ ಲೂಸ್ ಮಾದ; ಯೋಗಿ ಕನಸು ನನಸು

ರಮ್ಯಾ ಜೊತೆ ಲೂಸ್ ಮಾದ; ಯೋಗಿ ಕನಸು ನನಸು

Posted By:
Subscribe to Filmibeat Kannada

ಸುದೀರ್ಘ ಸಮಯದ ಬಳಿಕ ರಮ್ಯಾ ಅಭಿನಯದ ಸಾಲು ಸಾಲು ಚಿತ್ರಗಳು ತೆರೆಗೆ ಅಪ್ಪಳಿಸಲು ಸಿದ್ಧವಾಗಿವೆ. ಜೊತೆಗಾರ, ಸಂಜು ವೆಡ್ಸ್ ಗೀತಾ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಮತ್ತು ಕಿಚ್ಚ ಹುಚ್ಚ ಚಿತ್ರಗಳು ಯಾವುದೇ ಸಮಯಲ್ಲಿ ಬಿಡುಗಡೆಗೆಯಾಗುವ ಸಾಧ್ಯತೆಯಿದೆ.

ಈ ಮಧ್ಯೆ ರಮ್ಯಾ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಒಂದು ಲೂಸ್ ಮಾದ ಖ್ಯಾತಿಯ ಯೋಗೀಶ್ ಜೊತೆ ಮತ್ತೊಂದು ಶ್ರೀನಗರಕಿಟ್ಟಿಯೊಂದಿಗೆ ಒಂದು ಚಿತ್ರ. ಯೋಗೀಶ್ ಜೊತೆ ಅಭಿನಯದ ಚಿತ್ರಕ್ಕೆ 'ಲೂಸ್ ಮಾದ' ಎಂದಿಡಲಾಗಿದೆ. ಕಿಟ್ಟಿ ಜೊತೆಗಿನ ಚಿತ್ರ 'ಸಿದ್ದಲಿಂಗು' ಸಹ ಶೀಘ್ರದಲ್ಲೆ ಸೆಟ್ಟೇರಲಿದೆ. ರಮ್ಯಾ ಜೊತೆಗೆ ನಟಿಸಬೇಕು ಎಂಬ ಯೋಗಿ ಕನಸು 'ಲೂಸ್ ಮಾದ' ಚಿತ್ರದ ಮೂಲಕ ಸಾಕಾರವಾಗಲಿದೆ.

ಯೋಗೀಶ್ ಜೊತೆಗೆ ನಟಿಸುತ್ತಿರುವ ಚೊಚ್ಚಲ ಚಿತ್ರ 'ಲೂಸ್ ಮಾದ'. 'ಸಿದ್ಧಲಿಂಗು' ಚಿತ್ರ ಕಿಟ್ಟಿ ಜೊತೆ ರಮ್ಯಾ ಅಭಿನಯಿಸುತ್ತಿರುವ ಎರಡನೆ ಚಿತ್ರ. ಕಿಟ್ಟಿ, ರಮ್ಯಾ ಒಟ್ಟಿಗೆ ಅಭಿನಯಿಸಿದ ಮೊಟ್ಟ ಮೊದಲ ಚಿತ್ರ ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತ'.

ಸಿದ್ದಲಿಂಗು ಚಿತ್ರವನ್ನು 'ಎರಡನೆ ಮದುವೆ' ಚಿತ್ರವನ್ನು ನಿರ್ಮಿಸಿದ್ದ ಸುರೇಶ್ ನಿರ್ಮಿಸುತ್ತಿದ್ದಾರೆ. ಆಕ್ಷನ್, ಕಟ್ಟು ಹೇಳುತ್ತಿರುವುದು ವಿಜಯ ಪ್ರಕಾಶ್. ಅನೂಪ್ ಸೀಳಿನ್ ಅವರ ಸಂಗೀತ, ಜ್ಞಾನಮೂರ್ತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ಭಾಗ್ಯನೊಬ್ಬ ಕಾರು ಕೊಂಡುಕೊಳ್ಳಬೇಕು ಎಂಬ ಕನಸಿನ ಸುತ್ತ ಚಿತ್ರಕಥೆ ಸುತ್ತುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada