»   »  ಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ

ಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ

Subscribe to Filmibeat Kannada

2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.

'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ ಪ್ರದರ್ಶನಗೊಂಡಿದೆ. ಇದೀಗ ಸಾರ್ವಜನಿಕರ ಪ್ರದರ್ಶನಕ್ಕಾಗಿ ಪಿಂಕಿ ಬೆಂಗಳೂರಿಗೆ ಆಗಮಿಸಿದ್ದಾಳೆ. ಸೀಳ್ದುಟಿ ಸಮಸ್ಯೆಯ ಬಗ್ಗೆ ಈ ಸಾಕ್ಷ್ಯ ಚಿತ್ರ ಬೆಳಕು ಚೆಲ್ಲುತ್ತದೆ.

ಈ ಬಗ್ಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕಿ ಮೇಗನ್ ಮೈಲಾನ್, ಚಿತ್ರದಲ್ಲಿ ನೇರ ಮತ್ತು ಸರಳ ಸಂದೇಶವಿದೆ.ಸೀಳ್ದುಟಿ ಸಮಸ್ಯೆ ಚಿಕಿತ್ಸೆ ಇದೆ. ಈ ಸಮಸ್ಯೆಯನ್ನು ಗುಣಪಡಿಸಬಹುದು. ಯಾವುದೇ ಮಗು ಸಮಸ್ಯೆಯಿಂದ ಬಳಲಬಾರದು. ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ ನ್ಯ್ಯೂನ್ಯತೆಯನ್ನು ಸರಿಪಡಿಸಬೇಕು ಎಂದು ತಿಳಿಸಿದ್ದಾರೆ.

ಸೀಳ್ದುಟಿಯಿಂದ ಬಳಲುತ್ತಿದ್ದ ಮಗು ಸಾಮಾಜಿಕವಾಗಿ ದೂರವಾಗುತ್ತದೆ. ಹುಡುಗಿಯ ಕುರಿತಾದ 'ಸ್ಮೈಲ್ ಪಿಂಕಿ' ಎಂಬ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಒಲಿದುಬಂದಿತ್ತು. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಹತ್ತು ಲಕ್ಷ ಮಂದಿ ಸೀಳ್ದುಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈ ಸಮಸ್ಯೆಗೆ ಉಚಿತವಾಗಿ ಚಿಕಿತ್ಸೆ ನೀಡುವ ಸ್ಮೈಲ್ ಟ್ರೈನ್ ಎಂಬ ಸಂಸ್ಥೆ ಯ ಬಗ್ಗೆ ಈ ಸಾಕ್ಷ್ಗ್ಯ ಚಿತ್ರ ಬೆಳಕು ಚೆಲ್ಲುತ್ತದೆ. ಬೆಂಗಳೂರಿನಲ್ಲಿ ಎರಡು ಶಾಖೆಗಳು ಸೇರಿದಂತೆ ಭಾರತದಲ್ಲಿ ಒಟ್ಟು 160 ಶಾಖೆಗಳನ್ನು ಈ ಸಂಸ್ಥೆ ಹೊಂದಿದೆ. ಮಹಾವೀರ್ ಜೈನ್ ಆಸ್ಪತ್ರೆ ಮತ್ತು ಬೆಂಗಳೂರು ಆಸ್ಪತ್ರೆ ತಿಂಗಳಿಗೆ 60 ಮಂದಿಗೆ ಸೀಳ್ದುಟಿ ಸಮಸ್ಯೆಯನ್ನು ಬಗೆಹರಿಸುತ್ತಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada