For Quick Alerts
  ALLOW NOTIFICATIONS  
  For Daily Alerts

  ಜುಲೈ.10ರಿಂದ ಸ್ನೇಹಲೋಕ ಕ್ರಿಕೆಟ್ ಟೂರ್ನಿ

  By Rajendra
  |

  ಇದೇ ಭಾನುವಾರ (ಜು.10)ರಂದು ಡಾ.ವಿಷ್ಣುವರ್ಧನ್ ಸ್ಮರಣಾರ್ಥ ಸ್ನೇಹಲೋಕ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಒಂದು ತಿಂಗಳ ಕಾಲ ಜಯನಗರದ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಟೆನ್ನಿಸ್ ಬಾಲ್ ಟೂರ್ನಿಮೆಂಟ್ ನಡೆಯಲಿದೆ. ಜು.10ರಂದು ಬೆಳಗ್ಗೆ 10ಕ್ಕೆ ಆರಂಭವಾಗುವ ಕ್ರಿಕೆಟ್ ಸೆಪ್ಟೆಂಬರ್ 11ರ ತನಕ ನಡೆಯಲಿದೆ.

  ಕ್ರಿಕೆಟ್‌ನಲ್ಲಿ ಹೊಸ ಪ್ರತಿಭೆಗಳನ್ನು ಹುಡುಕಲು ಡಾ.ವಿಷ್ಣುವರ್ಧನ್ ಕಟ್ಟಿದ ಸಂಸ್ಥೆ ಸ್ನೇಹಲೋಕ. ಪಂದ್ಯಾವಳಿ ಬಗ್ಗೆ ಮಾಹಿತಿ ನೀಡಿದ ಹಿರಿಯ ನಟ ಶಿವರಾಮ್ ಅವರು, ಕೇವಲ ಕಾರ್ಪೋರೇಟ್ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

  ಇದುವರೆಗೂ 16 ತಂಡಗಳು ಹೆಸರನ್ನು ನೋಂದಾಯಿಸಿವೆ. ಪ್ರತಿ ಭಾನುವಾರ ಎರಡು ಪಂದ್ಯಗಳು ನಡೆಯಲಿವೆ. ಈ 16 ತಂಡಗಳ ನಡುವೆ 16 ಸೀಮಿತ ಓವರ್‌ಗಳಲ್ಲಿ ಆಟ ನಡೆಯಲಿದೆ. ನಾಲ್ಕು ಕ್ವಾರ್ಟರ್ ಫೈನಲ್ಸ್, ಎರಡು ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದ ಮೂಲಕ ಸ್ನೇಹಲೋಕ ಕಪ್‌ಗೆ ಹೋರಾಟ ನಡೆಯಲಿದೆ. ಗೆದ್ದ ತಂಡದೊಂದಿಗೆ ಸ್ನೇಹಲೋಕ ಪಂದ್ಯ ಆಡಲಿದೆ.

  ಜಯನಗರ ಶಾಸಕ ವಿಜಯಕುಮಾರ್, ಸಿಕೆ ರಾಮಮೂರ್ತಿ, ಪದ್ಮಶ್ರೀ ಜಿ ಆರ್ ವಿಶ್ವನಾಥ್, ಪದ್ಮಶ್ರೀ ಅನಿಲ್ ಕುಂಬ್ಳೆ, ಬಿ ರಘುನಾಥ್, ರಾಕ್‌ಲೈನ್ ವೆಂಕಟೇಶ್, ಡಾ.ಭಾರತಿ ವಿಷ್ಣುವರ್ಧನ್ ಜು.10ರ ಉದ್ಘಟನಾ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಿಸ್ ಮಾಡಿಕೊಳ್ಳದೆ ಜಯನಗರಕ್ಕೆ ಬರ್ತೀರಾ ತಾನೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Sahaha Simha Dr Vishnuvardhana memorial ‘Snehaloka’ cricket tournament will be flagged off on 10th July at 10 in the morning and go on till September 11 at National College Grounds, Jayanagar. It is a Tennis Ball Cricket tournament.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X