For Quick Alerts
  ALLOW NOTIFICATIONS  
  For Daily Alerts

  ಈ ವಾರ ಬಹುನಿರೀಕ್ಷಿತ ತಮಸ್ಸು ತೆರೆಗೆ

  By Rajendra
  |

  'ಆ ದಿನಗಳು' ಎಂಬ ಯಶಸ್ವಿ ಚಿತ್ರ ಸೇರಿದಂತೆ ಕೆಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದ ಪತ್ರಕರ್ತ ಅಗ್ನಿಶ್ರೀಧರ್ 'ತಮಸ್ಸು' ಚಿತ್ರವನ್ನು ಬಹಳ ಆಸ್ಥೆಯಿಂದ ನಿರ್ದೇಶಿಸಿದ್ದಾರೆ. ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್ ಅಮಾನ್ ಹಾಗೂ ರವೀಂದ್ರ ನಿರ್ಮಿಸಿರುವ 'ತಮಸ್ಸು' ಚಿತ್ರ ಈ ವಾರ(ಜೂ.11) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

  ಈ ಚಿತ್ರದ ಕಥೆಗಾರರಾಗಿರುವ ಅವರು ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಸಂದೀಪ್ ಚೌಟ ಸಂಗೀತ ನೀಡಿದ್ದಾರೆ. ಶಿವರಾಜಕುಮಾರ್ ನಾಯಕನಾಗಿ, ಪದ್ಮಪ್ರಿಯ ನಾಯಕಿಯಾಗಿ ಅಭಿನಯಿಸಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ನಾಸರ್, ಹರ್ಷಿಕಾ ಪೂಣಚ್ಛ, ಆಸೀಪ್, ಸುಧಾ ಬೆಳವಾಡಿ, ಸತ್ಯ ಮುಂತಾದವರಿದ್ದಾರೆ.

  ಸುಂದರನಾಥ ಸುವರ್ಣ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನಾಗೇಂದ್ರ ಅರಸ್ ಸಂಕಲನವಿದೆ. ಡಿಫ಼ರೆಂಟ್ ಡ್ಯಾನಿ ಸಾಹಸ, ಶಶಿಧರ್ ಅಡಪ ಕಲಾ ನಿರ್ದೇಶನ ಹಾಗೂ ಮಧುಗಿರಿ ಪ್ರಕಾಶ್ ಅವರ ನಿರ್ಮಾಣ ನಿರ್ವಹಣೆ 'ತಮಸ್ಸು ಚಿತ್ರಕ್ಕಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X