»   »  ಸೈಕಲ್ ಮೇಲೆ ಅಂಬಾರಿ ಹೊತ್ತ ಯೋಗೀಶ್!

ಸೈಕಲ್ ಮೇಲೆ ಅಂಬಾರಿ ಹೊತ್ತ ಯೋಗೀಶ್!

Posted By: *ಜಯಂತಿ
Subscribe to Filmibeat Kannada
Yogish
ಖಚಾಖಚಿ ಜನ. ಮೆಜೆಸ್ಟಿಕ್‌ನ ಆನಂದರಾವ್ ಸರ್ಕಲ್. ತಮಟೆಯ ಸದ್ದು. ಲೌಡ್ ಸ್ಪೀಕರ್‌ನಲ್ಲಿ ಶೇಕ್ ಶೇಕ್ ಶೇಕ್ ಯುವರ್ ಬಾಡಿ ಹಾಡೇ ಜಾಗ ಬಿಡಿ ಅನ್ನುವಂತಿತ್ತು. ಜನಜಂಗುಳಿಯ ನಡುವೆ ಸೈಕಲ್. ಅದರ ಮೇಲೆ ಲೂಸ್ ಮಾದ ಅಲಿಯಾಸ್ ಯೋಗೀಶ್. ಮುಂದೆ ಸೈಕಲ್‌ನ ಬಾರ್ ಮೇಲೆ ನಾಯಕಿ ಸುಪ್ರೀತಾ. ಇದು ಪ್ರಚಾರದ ಹೊಸ ಸ್ಟಂಟ್. ಅಂಬಾರಿ ಚಿತ್ರಕ್ಕೆ ಜನರನ್ನು ಆಕರ್ಷಿಸಲು ಯೋಗೀಶ್ ಬೀದಿಗೆ ಇಳಿದಿದ್ದು ಹೀಗೆ.

ಶುಕ್ರವಾರ ಜಂಗ್ಲಿ ಹಾಗೂ ಬಿರುಗಾಳಿ ತೆರೆಕಂಡವು. ಎರಡೂ ನಿರೀಕ್ಷಿತ ಚಿತ್ರಗಳು. ಜೊತೆಗೆ ಬಜೆಟ್ ವಿಷಯದಲ್ಲೂ ಎರಡೂ ದೊಡ್ಡವೇ. ಅವನ್ನು ಮೀರಿ ತನ್ನ ಚಿತ್ರಕ್ಕೆ ಜನ ಬರಲಿ ಅನ್ನೋದು ಯೋಗೀಶ್ ಉದ್ದೇಶ. ಅದಕ್ಕೇ ಅವರು ಈ ರೀತಿ ಪ್ರಚಾರಕ್ಕೆ ಇಳಿದದ್ದು. ಕಾಕತಾಳಿಯವೆಂಬಂತೆ ಸದ್ಯಕ್ಕೆ ಕಲೆಕ್ಷನ್ ಸುಮಾರಾಗಿರುವುದು ಅವರ ಚಿತ್ರವೇ. ಕೈಲಿ ಸಾಕಷ್ಟು ನಟನೆಯ ಅವಕಾಶಗಳಿರುವ ಯೋಗೀಶ್ ಗಾಂಧಿನಗರದ ಡಾರ್ಲಿಂಗ್ ಅನ್ನಿಸಿಕೊಳ್ಳುತ್ತಿರುವುದು ಅವರ ಇಂಥ ಧೋರಣೆಯಿಂದಲೇ. ಸಿನಿಮಾ ತೆರೆಕಾಣುವ ದಿನವೇ ನಾಪತ್ತೆಯಾಗುವ ಕೆಲವು ನಾಯಕರ ನಡುವೆ ಯೋಗೀಶ್ ನಡುರಸ್ತೆಯಲ್ಲಿ ಸೈಕಲ್ ತುಳಿಯುವುದು ಸಣ್ಣ ವಿಷಯವೇನೂ ಅಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada