»   » ನಟಿ ಜೆನಿಲಿಯಾ ಬ್ಯಾನ್ ಮಾಡಿದ ಕಾಲಿವುಡ್ 'ಮಾ'

ನಟಿ ಜೆನಿಲಿಯಾ ಬ್ಯಾನ್ ಮಾಡಿದ ಕಾಲಿವುಡ್ 'ಮಾ'

Posted By:
Subscribe to Filmibeat Kannada

ಮೋಹಕ ನಟಿ ಜೆನಿಲಿಯಾ ಡಿಸೋಜ್ ರನ್ನು ತೆಲುಗು ಚಿತ್ರರಂಗ ಬ್ಯಾನ್ ಮಾಡಿದೆ. ಸಿನಮಾ ಕಲಾವಿದರ ಸಂಘದಲ್ಲಿ ಅವರು ಹೆಸರು ನೊಂದಾಯಿಸದಿದ್ದುದೇ ಈ ನಿರ್ಧಾರಕ್ಕೆ ಕಾರಣ. ಅವರು ಹೆಸರು ನೊಂದಾಯಿಸಿಕೊಳ್ಳುವವರೆಗೂ ಈ ಬ್ಯಾನ್ ಜಾರಿಯಲ್ಲಿ ಇರುತ್ತದೆ.

ಸಿನಿಮಾ ಕಲಾವಿದರ ಸಂಘ ಮಾ, ಹೆಸರು ನೊಂದಾಯಿಸಬೇಕೆಂದು ಟಾಪ್ ಹೀರೋಯಿನ್ ಗಳಾದ ತ್ರಿಷಾ ಕೃಷ್ಣನ್, ಶ್ರೇಯಾ ಶರಣ್, ಇಲಿಯಾನಾ, ಪ್ರಿಯಾಮಣಿ ಇವರಿಗೆಲ್ಲ ನೋಟೀಸ್ ನೀಡಿತ್ತು. ಆದರೆ ಜೆನಿಲಿಯಾ ಮಾತ್ರ ಇದಕ್ಕೆ ಕ್ಯಾರೇ ಅನ್ನಲಿಲ್ಲ. ಯಾವುದೇ ಪ್ರತಿಕ್ರಿಯೆ ನೀಡದ ಜೆನಿಲಿಯಾ ಈಗ ಬ್ಯಾನ್ ಆಗಿದ್ದಾರೆ.

ಇದೀಗ ಜೆನಿಲಿಯಾ ನಟ ರಾಣಾ ಜೊತೆ 'ನಾ ಇಷ್ಟಮ್' ಸಿನಿಮಾದಲ್ಲಿ ನಟಿಸುತ್ತಿದ್ದು ಅದು ಪೂರ್ಣಗೊಂಡ ತಕ್ಷಣ ಜೆನಿಲಿಯಾ ಬ್ಯಾನ್ ಅನ್ವಯವಾಗಲಿದೆ. ಅಂದಹಾಗೆ ಈ ಜೆನಿಲಿಯಾ ಹಿಂದಿ, ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅವರ ನಟನೆಯ ಕನ್ನಡ ಚಿತ್ರ ಶಿವರಾಜ್ ಕುಮಾರ್ ಜೋಡಿಯ 'ಸತ್ಯ ಇನ್ ಲವ್'. (ಒನ್ ಇಂಡಿಯಾ ಕನ್ನಡ)

English summary
Genelia has come under the scrutiny of Movie Artistes Association after she failed to register her name in the organisation. It has imposed a ban on her from the Telugu film industry till she takes the membership.
 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada