»   »  ಗಿರೀಶ್ ಕಾಸರವಳ್ಳಿ ಛಾಯಾಗ್ರಾಹಕರಾದಾಗ!

ಗಿರೀಶ್ ಕಾಸರವಳ್ಳಿ ಛಾಯಾಗ್ರಾಹಕರಾದಾಗ!

Subscribe to Filmibeat Kannada
Girish Kasaravalli
ಗಿರೀಶ್ ಕಾಸರವಳ್ಳಿ ಎಂದ ತಕ್ಷಣ ನಮಗೆ ಥಟ್ಟನೆ ಹೊಳೆಯುವುದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಎಂದು. ಆದರೆ ಅವರು ಯವಾಗ ಛಾಯಾಗ್ರಾಹಕರಾದರು? ಎಂಬ ಪ್ರಶ್ನೆಗೆ ಸ್ವತಃ ಗಿರೀಶ್ ಅವರೇ ಕಕ್ಕಾಬಿಕ್ಕಿಯಾದ ಘಟನೆ ನಡೆಯಿತು.

ಹರೀಶ್ ರಾಜ್ ನಿರ್ದೇಶನದ 'ಕಲಾಕಾರ್' ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಕಾಸರವಳ್ಳಿ ಆಗಮಿಸಿದ್ದರು. ಕಾಸರವಳ್ಳಿ ಅವರೇನೋ ಸಮಯಕ್ಕೆ ಸರಿಯಾಗಿ ಬಂದಿದ್ದರು. ಆದರೆ ಕಾರ್ಯಕ್ರಮ ಮಾತ್ರ ತಡವಾಗಿ ಆರಂಭವಾಯಿತು. ಆರಾಮವಾಗಿ ಕುಳಿತಿದ್ದ ಗಿರೀಶ್ ಅವರನ್ನು ಟಿವಿ ವಾಹಿನಿಯೊಂದರ ಹೊಸ ವರದಿಗಾರನೊಬ್ಬ ಸಂದರ್ಶನ ಮಾಡಲು ಮುಂದಾದ.

ಗಿರೀಶ್ ಕಾಸರವಳ್ಳಿ ಅವರ ಮುಖಕ್ಕೆ ಕ್ಯಾಮೆರಾ ಹಿಡಿದು, ಕಲಾಕಾರ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದೀರಾ... ಹೇಗಿತ್ತು ನಿಮ್ಮ ಅನುಭವ? ಎಂದು ಕೇಳಬೇಕೆ. ಈ ಘಟನೆಯಿಂದ ಇಡೀ ಕಾರ್ಯಕ್ರಮ ನಗೆಗಡಲಲ್ಲಿ ಮುಳುಗಿತು. ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಿರೀಶ್ ಕಾಸರವಳ್ಳಿ ಅವರನ್ನು ಛಾಯಾಗ್ರಾಹಕ ಎಂದು ಆ ವರದಿಗಾರ ತಪ್ಪಾಗಿ ತಿಳಿದಿದ್ದದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ನಿರ್ದೇಶಕ ತಾಯಿ ಇದ್ದಂತೆ: ಗಿರೀಶ್ ಕಾಸರವಳ್ಳಿ
ಹರೀಶ್ ರಾಜ್ ಕಲಾಕಾರ್ ಚಿತ್ರಕ್ಕೆ ಕ್ಲೀನ್ ಸೆನ್ಸಾರ್
ದುಬಯ್ ಬಾಬು ಚಿತ್ರದ ಹಾಡುಗಳು ಹೇಗಿವೆ?
ಅನಂತ್ ಮತ್ತು ಸುಹಾಸಿನಿ ಎರಡನೇ ಮದುವೆ!
ಯೋಗೀಶ್ ಸಂಭಾವನೆ ದಿನಕ್ಕೆ ಸಾವಿರ ರುಪಾಯಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada