»   »  ಪೊರ್ಕಿ ಒಂದು ಅಪೂರ್ವ ಕಲಾಕೃತಿ: ದರ್ಶನ್

ಪೊರ್ಕಿ ಒಂದು ಅಪೂರ್ವ ಕಲಾಕೃತಿ: ದರ್ಶನ್

Subscribe to Filmibeat Kannada
Porki is antique piece: Darshan
ದರ್ಶನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ರೀಮೇಕ್ ಚಿತ್ರ ಪೊರ್ಕಿ ಚಿತ್ರೀಕರಣ ಆರಂಭವಾಗಿದೆ. ಪತ್ರಕರ್ತ ಗಣೇಶ್ ಕಾಸರಗೋಡು ನೇತೃತ್ವದಲ್ಲಿ ದತ್ತಾ ಅವರು ಪೊರ್ಕಿ ಚಿತ್ರವನ್ನು ಅಪಾರ ವೆಚ್ಚದಲ್ಲಿ ನಿರ್ಮಿಸುತ್ತಿರುವುದು ಗೊತ್ತೇ ಇದೆ.

ಸಂಭಾಷಣೆಕಾರ ಬಿ ಎ ಮಧು, ಛಾಯಾಗ್ರಾಹಕ ಕೃಷ್ಣಕುಮಾರ್, ದರ್ಶನ್, ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು, ನಿರ್ಮಾಪಕ ದತ್ತಾ ಈ ಚಿತ್ರ ಖಂಡಿತ ಬಾಕ್ಸಾಫೀಸ್ ನಲ್ಲಿ ದಾಖಲೆ ಮಾಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದೊಂದು ಕೌಟುಂಬಿಕ ಕಥಾಹಂದರವನ್ನು ಹೊಂದಿದ ಚಿತ್ರ. ಪೊರ್ಕಿ ಚಿತ್ರ ಯುವತಿಯಷ್ಟೇ ಸುಂದರವಾಗಿರುತ್ತದೆ ಎಂದು ಛಾಯಾಗ್ರಾಹಕ ಬಿ ಎ ಮಧು ಹೇಳಿದರು.

ತೆಲುಗು ಚಿತ್ರೋದ್ಯಮದ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದ ಚಿತ್ರ ಪೋಕಿರಿ. ನಟ ಮಹೇಶ್ ಬಾಬು ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಜೋಡಿ ತೆಲುಗು ಚಿತ್ರೋದ್ಯಮದಲ್ಲಿ ಹೊಸ ಸಂಚಲನ ಉಂಟು ಮಾಡಿತ್ತು. ಚಿತ್ರದ ನಾಯಕ ಐಪಿಎಸ್ ಅಧಿಕಾರಿಯಾಗಿದ್ದುಕೊಂಡು ಭೂಗತ ಪಾತಕಿಗಳೊಂದಿಗೆ ತಾನೂ ಒಬ್ಬ ಪಾತಕಿಯಂತೆ ನಟಿಸುತ್ತಿರುತ್ತಾನೆ. ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಚಿತ್ರ ಹೊಸ ತಿರುವು ಪಡೆದುಕೊಳ್ಳುತ್ತದೆ. ಇದನ್ನು ಪುರಿ ಜಗನ್ನಾಥ್ ಅದ್ಭುತವಾಗಿ ತೆರೆಗೆ ತಂದಿದ್ದರು. ಮಹೇಶ್ ಬಾಬು ನಟನೆ ಸಹ ಅಷ್ಟೇ ಚೆನ್ನಾಗಿ ಮೂಡಿಬಂದಿತ್ತು. ಕನ್ನಡದಲ್ಲಿ ಪೊರ್ಕಿ ಹೇಗೆ ಬರುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗೆ ಇದ್ದೇ ಇದೆ.

ಮೂಲತಃ ಚಿತ್ರ ವಿತರಕರಾದ ದತ್ತಾ ಅವರು ಆಂಧ್ರದ ಗುಂಟೂರಿನಲ್ಲಿ ಪೋಕಿರಿ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದಿದ್ದರು. ಈ ಪಾತ್ರಕ್ಕೆ ದರ್ಶನ್ ಅಚ್ಚುಕಟ್ಟಾಗಿ ಒಪ್ಪುತ್ತಾರೆ ಎಂಬುದು ದತ್ತಾ ಅವರ ವಿವರಣೆ. ಸುದೀರ್ಘ ವಿರಾಮದ ನಂತರ ಎಂ ಡಿ ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹರಿಕೃಷ್ಣ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ ಪೊರ್ಕಿ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೊರ್ಕಿಯಾಗಿ ದರ್ಶನ್,ಏಪ್ರಿಲ್‌ನಿಂದ ಚಿತ್ರೀಕರಣ
ದರ್ಶನ್ ರಿಂದ ಹೊರಾಂಗಣ ಚಿತ್ರೀಕರಣ ಘಟಕ
ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!
ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada