»   »  ಪ್ರೇಮ್ ಕಹಾನಿ ಈ ವಾರ (ಸೆ.11) ತೆರೆಗೆ

ಪ್ರೇಮ್ ಕಹಾನಿ ಈ ವಾರ (ಸೆ.11) ತೆರೆಗೆ

Posted By:
Subscribe to Filmibeat Kannada

ಈ ವರ್ಷದ ಬಹು ನಿರೀಕ್ಷಿತ ಮತ್ತೊಂದು ಕನ್ನಡ ಚಿತ್ರ 'ಪ್ರೇಮ್ ಕಹಾನಿ'.ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಹಂಬಲಿಸುತ್ತಿರುವ ಪ್ರೇಕ್ಷಕರ ಕುತೂಹಲಕ್ಕೆ ಈ ವಾರ ತೆರೆಬೀಳಲಿದೆ. ತಾಜ್‌ಮಹಲ್ ಆರ್.ಚಂದ್ರು ನಿರ್ದೇಶನದ ಪ್ರೇಮ್ ಕಹಾನಿ ಚಿತ್ರವು ಸೆಪ್ಟೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ತಾಜ್ ಮಹಲ್' ಬಳಿಕ ಆರ್ ಚಂದ್ರು ತಮ್ಮ ಎರಡನೇ ಚಿತ್ರ 'ಪ್ರೇಮ್ ಕಹಾನಿ' ಗೆಲುವಿನ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡಿದ್ದಾರೆ. ತಮ್ಮ 'ಪ್ರೇಮ್ ಕಹಾನಿ'ಚಿತ್ರ ಖಂಡಿತ 25 ವಾರಗಳಿಗೂ ಅಧಿಕ ದಿನ ಪ್ರದರ್ಶನ ಕಾಣಲಿದೆ ಎಂಬ ವಿಶ್ವಾಸವನ್ನು ಈಗಾಗಲೇ ಅವರು ವ್ಯಕ್ತಪಡಿಸಿದ್ದಾರೆ. ತಮ್ಮ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಪ್ರೇಮ್ ಕಹಾನಿ ಚಿತ್ರ ತಂಡವಿದೆ.

ಪ್ರೇಮ್ ಕಹಾನಿ ಚಿತ್ರದಲ್ಲಿನಇಬ್ಬರು ಪ್ರೇಮಿಗಳ ಬದುಕು ಈ ಶುಕ್ರವಾರದಿಂದ ಆರಂಭವಾಗಲಿದೆ. ಈ ಚಿತ್ರಕ್ಕೆ ಇಳಯರಾಜ ಸಂಗೀತ, ಕೆ.ಎಂ.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸವಿದೆ.

ಚಿತ್ರ ಸಾಹಿತಿ ಕೆ.ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಸಾಹಿತ್ಯ ಪ್ರೇಮ್ ಕಹಾನಿ ಚಿತ್ರಕ್ಕಿದೆ. ರಂಗಯಾಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೊ ನಾಗರಾಜ್, ಟೆನ್ನಿಸ್ ಕೃಷ್ಣ ಚಿತ್ರದ ಪಾತ್ರಧಾರಿಗಳು. ವಿಶೇಷ ಪಾತ್ರದಲ್ಲಿ ಮಹಾಲಕ್ಷ್ಮಿ ಬಡಾವಣೆ ಹಾಲಿ ಶಾಸಕ ನೆ.ಲ.ನರೇಂದ್ರ ಬಾಬು ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada