»   » ಮಧುಚಂದ್ರಕೆ ನ್ಯೂಜಿಲ್ಯಾಂಡ್ ಗೆ ಹಾರಿದ ರಂಭಾ!

ಮಧುಚಂದ್ರಕೆ ನ್ಯೂಜಿಲ್ಯಾಂಡ್ ಗೆ ಹಾರಿದ ರಂಭಾ!

Posted By:
Subscribe to Filmibeat Kannada

ಕೆನಡಾ ಮೂಲದ ಉದ್ಯಮಿ ಅನಿವಾಸಿ ಭಾರತೀಯ ಇಂದಿರನ್ ಮಾಂಗಲ್ಯ ಧಾರಣೆ ಮಾಡುವ ಮೂಲಕ ಖ್ಯಾತ ತಾರೆ ರಂಭಾ ಮದುವೆ ತಿರುಮಲ ತಿರುಪತಿಯಲ್ಲಿ ಗುರುವಾರ (ಏ.8) ನೆರವೇರಿತು. ಬಳಿಕ ನೂತನ ದಂಪತಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿ ಚೆನ್ನೈಗೆ ಹಿಂತಿರುಗಿದರು.

ರಂಭಾ ಮದುವೆಗೆ ನೆಂಟರಿಷ್ಟರು, ಬಂಧು ಬಳಗ ಸೇರಿದಂತೆ ಒಟ್ಟು 500 ಮಂದಿ ಆಗಮಿಸಿದ್ದರು. 10.30ರಿಂದ 11.45ರ ಶುಭ ಮುಹೂರ್ತದಲ್ಲಿ ರಂಭಾ ಮದುವೆ ನೆರವೇರಬೇಕಾಗಿತ್ತು. ಆದರೆ ನವವಧು ರಂಭಾ ಹಸೆಮಣೆಗೆ ಬರುವ ವೇಳೆಗೆ ಮುಹೂರ್ತ ಮೀರಿತ್ತು.

ತಿರುಪತಿಯ ಕರ್ನಾಟಕ ಅತಿಥಿ ಗೃಹದಲ್ಲಿ ರಂಭಾ ಮದುವೆ ಅದ್ದೂರಿಯಲ್ಲಿ ನಡೆಯಿತು. ರಂಭಾ ಕುಟುಂಬಿಕರು, ನೆಂಟರಿಷ್ಟರು, ಬಂಧುಬಳಗದವರನ್ನು ಮಾತ್ರ ಆಹ್ವಾನಿಸಲಾಗಿತ್ತು. ಲಗ್ನ ಪತ್ರಿಕೆ ಉಳ್ಳವರಿಗೆ ಮಾತ್ರ ಮದುವೆಯನ್ನು ನೋಡುವ ಸೌಭಾಗ್ಯ ಕಲ್ಪಿಸಲಾಗಿತ್ತು ಎಂದು ನಮ್ಮ ಚೆನ್ನೈ ಪ್ರತಿನಿಧಿ ಸೇತು ಶಂಕರ್ ತಿಳಿಸಿದ್ದಾರೆ.

ರಂಭಾ ಮದುವೆಗೆ ಆಗಮಿಸಿದ್ದವರಲ್ಲಿ ತಮಿಳು, ತೆಲುಗು ಚಿತ್ರರಂಗದ ನಟ ನಟಿಯರು ಸೇರಿದ್ದರು. ನಟಿ ರೋಜಾ ದಂಪತಿಗಳು, ತೆಲುಗಿನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಸೇರಿದಂತೆ ಹಲವಾರು ಮಂದಿ ಆಗಮಿಸಿದ್ದರು. ಜೊತೆಗೆ ಖ್ಯಾತ ಉದ್ಯಮಿಗಳು ಹಾಗೂ ಜನಪ್ರಿಯ ರಾಜಕಾರಣಿಗಳು ಉಪಸ್ಥಿತರಿದ್ದರು.

ಏಪ್ರಿಲ್ 11ರಂದು ಚೆನ್ನೈನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಂಭಾ ಆರತಕ್ಷತೆಗೆ ತೆಲುಗು, ತಮಿಳು ಚಿತ್ರರಂಗದ ಬಹುತೇಕರು ಆಗಮಿಸುವ ನಿರೀಕ್ಷೆಯಿದೆ. ಮದುವೆ ಮುಗಿದ ಮರುದಿನವೇ ರಂಭಾ ಮಧುಚಂದ್ರಕೆ ನ್ಯೂಜಿಲ್ಯಾಂಡ್ ಗೆ ಹಾರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada