»   » ಅಯ್ಯೋ... ಇಷ್ಟು ಬೇಗ ರಂಗಪ್ಪ ಹೋಗ್ಬಿಟ್ನಾ !

ಅಯ್ಯೋ... ಇಷ್ಟು ಬೇಗ ರಂಗಪ್ಪ ಹೋಗ್ಬಿಟ್ನಾ !

Subscribe to Filmibeat Kannada

ಪ್ರೀತಿಯಿಂದ ರಮೇಶ್ ಸಾಲು ಸಾಲು ಕಾಮಿಡಿ ಚಿತ್ರಗಳಲ್ಲಿ ನಟಿಸುತ್ತಿದ್ದರೂ ಪ್ರೇಕ್ಷಕರು ಮಾತ್ರ ದಯೆ ತೋರುತ್ತಿಲ್ಲ. ಆದರೂ ರಮೇಶ್ ಪಟ್ಟುಬಿಡದ ತ್ರಿವಿಕ್ರಮನಂತೆ ಮತ್ತಷ್ಟು ಚಿತ್ರಗಳನ್ನು ಹೆಗಲಿಗೆ ಹಾಕಿಕೊಂಡು ಮುನ್ನಡದಿದ್ದಾರೆ. ತಾವು ಅಭಿನಯಿಸಿದ ಎಲ್ಲಾ ಚಿತ್ರಗಳು ಯಾಕೆ ಸೋಲುತ್ತಿವೆ ಎಂಬ ಬೇತಾಳನ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ.

ಇದೀಗ ಅದೇ ಹುಮ್ಮಸ್ಸಿನಲ್ಲಿ ರಮೇಶ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ರಂಗಪ್ಪ ಹೋಗ್ಬಿಟ್ನಾ'. ಗುರುವಾರ(ಜುಲೈ.8) ಈ ಚಿತ್ರ ಸೆಟ್ಟೇರಿದೆ. ಪ್ರೀತಿಯಿಂದ ರಮೇಶ್ ನಿರ್ಮಿಸಿದ್ದ ಎನ್ ರವಿಕುಮಾರ್ ಅವರ ಚಿತ್ರವಿದು. ಆಕ್ಷನ್, ಕಟ್ ಹೇಳುತ್ತಿರುವವರು ಪ್ರಸನ್ನ. ಕತೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯನ್ನೂ ಇವರೇ ಹೊತ್ತಿದ್ದಾರೆ.

ಪ್ರಸನ್ನ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರವಿದು. ಇದಕ್ಕೂ ಮುನ್ನ ಇವರು ಸಿಕ್ಸರ್, ಮೊಗ್ಗಿನ ಮನಸು, ನಾನು ನೀನು ಜೋಡಿ ಶ್ರೀಹರಿಕಥೆ ಮತ್ತು ಕೃಷ್ಣನ್ ಲವ್ ಸ್ಟೋರಿ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಚಿತ್ರದಲ್ಲಿ ರಮೇಶ್ ಗೆ 'ಗಂಡಹೆಂಡತಿ' ಸಂಜತಾ ಜೊತೆಯಾಗಲಿದ್ದಾರೆ. ಸಿಹಿಕಹಿ ಚಂದ್ರು, ಕರಿಬಸವಯ್ಯ ಪ್ರಮುಖ ಪಾತ್ರಧಾರಿಗಳು.

ಬೆಂಗಳೂರು, ಮೈಸೂರಿನಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಎ ಸಿ ಮಹೇಂದರ್ ಅವರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. ಉಳಿದ ತಂತ್ರಜ್ಞರ ಹಾಗೂ ಕಲಾವಿದರ ಆಯ್ಕೆ ನಡೆಯುತ್ತಿದೆ. ಕಾನ್ಫಿಡೆಂಟ್ ಗ್ರೂಪ್ ಅರ್ಪಿಸುತ್ತಿರುವ ಚಿತ್ರ ಇದಾಗಿದ್ದು ಈ ಹಿಂದೆ ಈ ಚಿತ್ರಕ್ಕೆ ರಂಗೀಲಾ ಎಂದು ಹೆಸರಿಡಲಾಗಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada