»   »  ವಿಡಿಯೋ: ನಮ್ AREA ಲ್ ಒಂದಿನಾ ನೋಡಿ

ವಿಡಿಯೋ: ನಮ್ AREA ಲ್ ಒಂದಿನಾ ನೋಡಿ

Posted By:
Subscribe to Filmibeat Kannada

''ನಮ್ AREAಲ್ ಒಂದಿನಾ..." ಎಂಬ ವಿಶಿಷ್ಟ, ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಹೊಸ ಬಗೆಯ ಚಿತ್ರ ತಯಾರಿಸಿದ್ದಾರೆ ನಟ, ನಿರ್ದೇಶಕ ಅರವಿಂದ್ ಕೌಶಿಕ್. ಚಿತ್ರದ ಹೆಸರು ನೋಡಿದರೆ ಇದು ಪಕ್ಕಾ ರೌಡಿಸಂ, ಲಾಂಗು ಮಚ್ಚು ಚಿತ್ರ ಅಂಥಾ ಭಾವಿಸಿದರೆ ಅದರಲ್ಲಿ ತಪ್ಪೇನಿಲ್ಲ. ಕನ್ನಡದಲ್ಲಿ ಈಗ ಬರೋ ಹತ್ತರಲ್ಲಿ ಏಳು ಚಿತ್ರ ಲಾಂಗು ಮಚ್ಚುಗಳ ತುದಿಯಲ್ಲೆ ಸುತ್ತುತ್ತಿರುತ್ತವೆ.

ಬೇಕಾಬಿಟ್ಟಿ ಜೀವನ..ಬದ್ಕು ಚಿಂದಿ ಚಿತ್ರಾನ್ನ,,,ನಕ್ರಾ ಹೊಡೆದ್ರೆ ಗುನ್ನಾ.... ಒಟ್ನಲ್ಲಿ ವಿಚಿತ್ರವಾಗಿರ್ತಾರೆ ಜನ... ನಮ್ AREA ಲ್ ಒಂದಿನಾ...ಹೀಗಿದೆ ಟ್ರೈಲರ್ ನಲ್ಲಿ ಬರೋ ಡೈಲಾಗ್. ಆದರೆ ನನ್ನ ಚಿತ್ರ ರೌಡಿಸಮ್ ಚಿತ್ರ ಅಲ್ಲ. ಅಪ್ಪಟ ಜನಸಾಮಾನ್ಯರ ನೋವು ನಲಿವಿನ ಚಿತ್ರ ಎನ್ನುತ್ತಾರೆ ಕೌಶಿಕ್.

ತಮ್ಮ ಚಿತ್ರದಲ್ಲಿ ಎಲ್ಲವೂ ವಿಶಿಷ್ಟವಾಗಿರಬೇಕು ಎಂದು ಬಯಸುವ ಅರವಿಂದ್, ಚಿತ್ರದ ಟೈಟಲ್, ಪಾತ್ರಧಾರಿಗಳ ಹೆಸರನ್ನು ಕೂಡ ವಿಚಿತ್ರವಾಗಿ ಆರಿಸಿದ್ದಾರೆ. ಸೈಲೇನ್ಸರ್ ಸೀನ, ಲೈಟ್ ಕಂಬ, ಕರಡಿ ಕುಮಾರ, ತಿಕ್ಲ, ಪುಕ್ಲಾ..ಇತ್ಯಾದಿ. ಆದರೆ ಈ ರೀತಿ ಹೆಸರು ನಮ್ ಏರಿಯಾದಲ್ಲಿ(ಎಲ್ಲಾ ಏರಿಯಾದಲ್ಲೂ) ಕಾಮನ್ ಎನ್ನುತ್ತಾರೆ ನಿರ್ದೇಶಕರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada