»   » ಇಪ್ಪತ್ತನಾಲ್ಕನೆ ಮಹಡಿಯಿಂದ ಯಶ್ ಜಂಪ್

ಇಪ್ಪತ್ತನಾಲ್ಕನೆ ಮಹಡಿಯಿಂದ ಯಶ್ ಜಂಪ್

Posted By:
Subscribe to Filmibeat Kannada

ಯಶವಂತಪುರದ ರೈಲ್ವೇ ಸ್ಟೇಷನ್ ಹತ್ತಿರದ ಗೋಲ್ಡನ್ ಗ್ರಾಂಡ್ ಅಪಾರ್ಟ್‌ಮೆಂಟ್‌ನ 24ನೇ ಮಹಡಿಯಿಂದ ನಾಯಕ ಯಶ್ ಜಂಪ್ ಮಾಡುವ ದೃಶ್ಯವನ್ನು ಛಾಯಾಗ್ರಾಹಕ ಹೆಚ್.ಸಿ.ವೇಣು ಚಿತ್ರೀಕರಿಸಿಕೊಂಡರು. 'ರಾಜಧಾನಿ' ಚಿತ್ರಕ್ಕೆ ತುಮಕೂರು ರಸ್ತೆಯ ಗೋಲ್ಡನ್ ಗ್ರಾಂಡ್ ಅಪಾರ್ಟ್‌ಮೆಂಟ್ ಹಾಗೂ ಮಿನರ್ವಮಿಲ್‌ನಲ್ಲಿ ಹಾಡು ಹಾಗೂ ಸಾಹಸ ದೃಶ್ಯದ ಚಿತ್ರೀಕರಣ ನಡೆಯಿತು.

ಅಪಾಯಕಾರಿ ದೃಶ್ಯವಾಗಿರುವುದರಿಂದ ಸಾಹಸ ಕಲಾವಿದರ ಕೈಲಿ ಜಂಪ್ ಮಾಡಿಸಬೇಕೆಂದು ನಿರ್ದೇಶಕ ರಘುಜಯ ಸಿದ್ಧತೆಗಳನ್ನು ಮಾಡಿಕೊಂಡಾಗ ಯಶ್ ತಾನೇ ಈ ಸಾಹಸ ದೃಶ್ಯದಲ್ಲಿ ಅಭಿನಯಿಸುತ್ತೇನೆ ಎಂದು 24ನೇ ಮಹಡಿಯಿಂದ ಕೆಳಗೆ ಜಿಗಿದು ಚಿತ್ರ ನೈಜವಾಗಿ ಮೂಡಿಬರುವುದಕ್ಕೆ ತಮ್ಮ ಎಫರ್ಟ್ ಹಾಕಿದರು. ಈ ಚಿತ್ರವನ್ನು ಶ್ರೀ ದೇವಿರಮ್ಮ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎನ್.ಆರ್.ಸೌಮ್ಯ ಸತ್ಯನ್ ನಿರ್ಮಿಸುತ್ತಿದ್ದಾರೆ.

ಇದಲ್ಲದೆ ಮತ್ತೊಂದು ವಿಶೇಷ ಎಂದರೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನೃತ್ಯಗಾರ್ತಿ ಮುಮೈತ್ ಖಾನ್, ಮಿನರ್ವಮಿಲ್‌ನಲ್ಲಿ ಹಾಕಿದ್ದ ವಿಶೇಷ ಸೆಟ್‌ನಲ್ಲಿ ಹಾಡಿ ಕುಣಿದರು. 50 ಜನ ನೃತ್ಯ ಕಲಾವಿದರು ಹಾಗೂ ನಾಯಕರಾದ ಯಶ್, ಸತ್ಯ, ಚೇತನ್ ಚಂದ್ರ, ಸಂದೀಪ್ ಜೊತೆ ಐಟಂಗರ್ಲ್ ಮುಮೈತ್‌ಖಾನ್ ಸಂತಸದಿಂದ ಹಾಡೊಂದಕ್ಕೆ ಹೆಜ್ಜೆ ಹಾಕುವ ದೃಶ್ಯವನ್ನು ಅಲ್ಲಿ ಚಿತ್ರೀಕರಿಸಲಾಯಿತು. ಬೆಂಗಳೂರು ಸುತ್ತಮುತ್ತ ನಿರಂತರವಾಗಿ ರಾಜಧಾನಿಯ ಚಿತ್ರೀಕರಣ ಸಾಗಿದೆ.

ನಿರ್ದೇಶಕ ರಘುಜಯ ಕಥೆ, ಚಿತ್ರಕಥೆ ಬರೆದರೆ, ಕೆ.ವಿ.ರಾಜು ಸಂಭಾಷಣೆ ರಚಿಸಿದ್ದಾರೆ. ಹೆಚ್.ಸಿ.ವೇಣು, ಛಾಯಾಗ್ರಹಣ, ಅರ್ಜುನ್‌ರ ಸಂಗೀತ ಸಂಯೋಜನೆ, ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್, ಯೋಗರಾಜ್‌ಭಟ್‌ರ ಸಾಹಿತ್ಯ, ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ನಟ ಪ್ರಕಾಶ್ ರೈ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ಮಾಡಲು ಒಪ್ಪಿದ್ದಾರೆ. ನಾಯಕಿ ಇನ್ನೂ ಫೈನಲ್ ಆಗಿಲ್ಲ ಉಮಾಶ್ರೀ, ರಮೇಶ್‌ಭಟ್, ರಾಜೀವ್ ತಾಳಿಕೋಟೆ ಅರುಣ ಸಾಗರ ತಾರಾಗಣದಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada