»   » ಮಣಿರತ್ನಂ ಚಿತ್ರದಲ್ಲಿ ಮತ್ತೆ ಅರವಿಂದ ಸ್ವಾಮಿ

ಮಣಿರತ್ನಂ ಚಿತ್ರದಲ್ಲಿ ಮತ್ತೆ ಅರವಿಂದ ಸ್ವಾಮಿ

Posted By:
Subscribe to Filmibeat Kannada
Aravinda Swmay Mani Rathnam
ಮಣಿರತ್ನಂ ಮುಂದಿನ 'ಪೂಕದೈ' ಚಿತ್ರಕ್ಕೆ ಅರವಿಂದ ಸ್ವಾಮಿ ಆಯ್ಕೆಯಾಗುವ ಮೂಲಕ ದೊಡ್ಡದೊಂದು ತಿರುವು ದೊರೆತಂತಾಗಿದೆ. ಈ ಮೊದಲು ತಮ್ಮ 'ರೋಜಾ' ಮತ್ತು 'ಬಾಂಬೇ' ಚಿತ್ರಗಳಲ್ಲಿ ನಟಿಸಿದ್ದ ಅರವಿಂದ ಸ್ವಾಮಿಯನ್ನು ಮತ್ತೆ ಹೊಸ ಚಿತ್ರಕ್ಕೆ ಕರೆತರುವ ಮೂಲಕ ನಿರ್ದೇಶಕ ಮಣಿ ರತ್ನಮ್ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ಈ ಮೊದಲು ನಿರ್ದೆಶಕ ವಿಶಾಲ್ ರ 'ಸಮರನ್' ಚಿತ್ರದ ಪಾತ್ರವನ್ನು ನಿರಾಕರಿಸಿದ್ದ ಅರವಿಂದ ಸ್ವಾಮಿ ಮಣಿ ರತ್ನಂ ಚಿತ್ರವನ್ನು ಕೊಂಚವೂ ಯೋಚಿಸದೇ ಒಪ್ಪಿಕೊಂಡಿದ್ದಾರೆ. ಕಾರಣ, ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿ ಬೆಳೆಸಿದರೆಂಬ ಕೃತಜ್ಞತೆ ಮರೆಯಲಾದೀತೆ? ಅರವಿಂದ ಸ್ವಾಮಿಯ ಸ್ವಾಮಿನಿಷ್ಠೆಯ ಪರಿಯಿದು.

ಪೂಕದೈ ಚಿತ್ರದಲ್ಲಿ ಸಮಂತಾ ಅಥವಾ ಕಾರ್ತಿಕ್ ತಂದೆಯ ಪಾತ್ರದಲ್ಲಿ ಅರವಿಂದ ಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಇರುವ ಉಳಿದ ಪ್ರಮುಖರೆಂದರೆ ಅರ್ಜುನ್ ಸರ್ಜಾ ಮತ್ತು ಲಕ್ಷ್ಮೀ ಮಂಚು. ಮಣಿರತ್ನಂ ಚಿತ್ರಗಳ ಖಾಯಂ ಸಂಗಾತಿಗಳಾಗಿರುವ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಹಾಗೂ ಛಾಯಾಗ್ರಾಹಕ ರವಿ ಕೆ ಚಂದ್ರನ್ ಈ ಚಿತ್ರದಲ್ಲೂ ಜೊತೆಯಾಗಿದ್ದಾರೆ. ಒಟ್ಟಿನಲ್ಲಿ ಅರವಿಂದ ಸ್ವಾಮಿಯನ್ನು ಮತ್ತೆ ತೆರೆಯ ಮೇಲೆ ನೋಡುವ ಭಾಗ್ಯ ಪ್ರೇಕ್ಷಕರಿಗೆ ದೊರೆಯಲಿದೆ. (ಏಜೆನ್ಸೀಸ್)

English summary
The next movie of Mani Ratnam titled Pookadai just got bigger with the inclusion of Arvind Swamy to its cast. Well, the ace director has reportedly signed the actor, who worked with him in super hit movies like Roja and Bombay.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada