For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಶಂಕರ್ ಹೊಸ ಚಿತ್ರ ಸದ್ಯದಲ್ಲೇ ಬರಲಿದೆ

  |

  ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ನಂಬನ್' ಚಿತ್ರಕ್ಕೆ ಪ್ರೇಕ್ಷಕರಿಂದ ಬಂದ ಅಭೂತಪೂರ್ವ ಪ್ರತಿಕ್ರಿಯೆಗೆ ಸಖತ್ ಖುಷಿಯಾಗಿದ್ದಾರೆ ನಿರ್ದೇಶಕ ಶಂಕರ್. ಇದೀಗ ಹೊಸ ಪ್ರಾಜೆಕ್ಟ್ ಪ್ರಾರಂಭಿಸಲಿರುವ ಶಂಕರ್, ನಂಬನ್ ಚಿತ್ರವನ್ನು ಗೆಲ್ಲಿಸಿದ್ದಕ್ಕಾಗಿ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಹೊಸ ಚಿತ್ರ ಪ್ರಾರಂಭಿಸಲಿರುವುದಾಗಿ ಘೋಷಿಸಿದ್ದಾರೆ.

  ಆದರೆ, "ಶುರುವಾಗಲಿರುವ ಹೊಸ ಚಿತ್ರಕ್ಕೆ ನಾಯಕ, ನಾಯಕಿ ಯಾರೆಂಬುದು ಇನ್ನೂ ಫೈನಲ್ ಆಗಿಲ್ಲ. ಕಥೆಯ ಹಂತದಲ್ಲೇ ಇರುವ ಮುಂದಿನ ಪ್ರಾಜೆಕ್ಟ್ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ ಶಂಕರ್. ಇನ್ನೂ ನಂಬನ್ ಚಿತ್ರದ ಯಶಸ್ಸಿನ ಹ್ಯಾಂಗೋವರ್ ನಲ್ಲೇ ಇರುವ ಶಂಕರ್, ಮಾಧ್ಯಮದ ಮಿತ್ರರಿಗೂ ಯಶಸ್ಸಿಗೆ ಕಾರಣರಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

  ಶಂಕರ್ ಅವರ ಮುಂದಿನ ಚಿತ್ರಕ್ಕೆ ನಾಯಕರಾಗಿ ಕಮಲಹಾಸನ್ ಅಥವಾ ಚಿರಂಜೀವಿ ಇರುತ್ತಾರೆಂಬ ಅಂತರ್ಜಾಲದಲ್ಲಿ ಬಂದ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಶಂಕರ್, ಸದ್ಯಕ್ಕೆ ಯಾರನ್ನೂ ಆಯ್ಕೆ ಮಾಡಿಲ್ಲವೆಂದಿದ್ದಾರೆ. ಆದರೆ ಅವರು ಕಮಲಹಾಸನ್ ಅಥವಾ ಚಿರಂಜೀವಿ ಅಲ್ಲ ಎಂದು ಹೇಳಿಲ್ಲವಾದ್ದರಿಂದ ವದಂತಿಗಳು ಸುಳ್ಳು ಎಂಬುದನ್ನೂ ತಳ್ಳಿಹಾಕುವಂತಿಲ್ಲ. (ಏಜೆನ್ಸೀಸ್)

  English summary
  Acclaimed director Shankar, who is basking with the success of Nanban, has started working on his next project.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X