For Quick Alerts
  ALLOW NOTIFICATIONS  
  For Daily Alerts

  ಗರಂ ಆದ 'ಸೂಪರ್' ಅಶೋಕ್ ಕಶ್ಯಪ್ ಸಂದರ್ಶನ

  By *ವಿನಾಯಕರಾಮ ಕಲಗಾರು
  |

  ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಗರಂ ಆಗಿದ್ದಾರೆ. ತಾವು ಮಾಡದೇ ಇರುವ ತಪ್ಪಿಗೆ, ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಎಸಗುತ್ತಿರುವವರ ವಿರುದ್ಧ ತಿರುಗೇಟು ನೀಡಿದ್ದಾರೆ. ಈ ಸಾಲಿನ ರಾಜ್ಯಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಅಶೋಕ್ ಕಶ್ಯಪ್ ಇದ್ದ ಕಾರಣ ಸೂಪರ್ ಚಿತ್ರಕ್ಕೆ ಬೆಸ್ಟ್ ಸಿನಿಮಾ ಅವಾರ್ಡ್ ಬಂತು. ಅವರು ಅದೇ ಚಿತ್ರದ ಛಾಯಾಗ್ರಾಹಕರಾಗಿದ್ದರಿಂದ ಅವರು ತಮ್ಮ ಪ್ರಭಾವ ಬೀರಿ ಆ ಚಿತ್ರಕ್ಕೆ ಮಾನ್ಯತೆ ತಂದುಕೊಂಟಿದ್ದಾರೆ ಎಂಬ ಊಹಾಪೋಹ ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ.

  ದಟ್ಸ್ ಕನ್ನಡಕ್ಕೆ ವಿನಾಯಕರಾಮ ಕಲಗಾರು ನಡೆಸಿದ ಸಂದರ್ಶನದಲ್ಲಿ ಅಶೋಕ್ ಕಶ್ಯಪ್ ಏನು ಹೇಳುತ್ತಾರೆ ಕೇಳೋಣ ಬನ್ನಿ...

  1. ಕಶ್ಯಪ್ಜೀ.. ಈ ಬಗ್ಗೆ ತಾವು ಏನು ಹೇಳುತ್ತೀರಿ?

  ನೋಡಿ ಸರ್, ನಾನು ಚಿತ್ರೋದ್ಯಮದಲ್ಲಿ ದುಡಿಯುತ್ತಾ ಮೂವತ್ತು ವರ್ಷಗಳೇ ಕಳೆದವು. ನನಗೆ ಇಂಥ ಚೀಪ್ ಕೆಲಸ ಮಾಡಿ, ಅವಾರ್ಡ್ ಕೊಡಿಸುವ ಕೀಳುಮಟ್ಟದ ಬುದ್ಧಿ ಇಲ್ಲ.

  2. ಹಾಗಾದರೆ ಸೂಪರ್ ಚಿತ್ರಕ್ಕೆ ನೀವೇ ಕ್ಯಾಮೆರಾಮನ್ ಅಲ್ಲವಾ?

  ಹೌದು, ನನ್ನನ್ನು ಅವಾರ್ಡ್ ಆಯ್ಕೆ ಕಮೀಟಿಗೆ ಸೇರಿಕೊಳ್ಳಲು ಕೇಳಿಕೊಂಡಾಗ ವಾರ್ತಾ ಇಲಾಖೆಯ ಡೈರೆಕ್ಟರ್ ಬೇವಿನಮರದ್ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೆ, ಎಲ್ಲರ ಅಪೇಕ್ಷೆ ಮತ್ತು ಅನುಮತಿ ಮೇರೆಗೇ ನಾನು ಅವಾರ್ಡ್ ಕಮೀಟಿ ಸೇರಿಕೊಂಡೆ. ಅದೇ ರೀತಿ ನಾನು ಸೂಪರ್ ಚಿತ್ರಕ್ಕೆ ವೋಟ್ ಮಾಡುವ ಸಂದರ್ಭದಲ್ಲಿ ಪೂರ್ತಿಯಾಗಿ ಹೊರಗಿದ್ದೆ.

  3. ಸ್ವಲ್ಪ ಡೀಟೇಲ್ ಆಗಿ ಹೇಳ್ತೀರಾ ಪ್ಲೀಸ್?

  ಅವಾರ್ಡ್ ಕಮಿಟಿಯಲ್ಲಿ ಒಟ್ಟು ಎಂಟು ಮಂದಿ ಸದಸ್ಯರಿದ್ದೆವು. ಹೇಮಾ ಚೌಧರಿಯವರೂ ಇದ್ದರು. ಅವರು ಅಭಿನಯಿಸಿದ ರೀಮೇಕ್ ಸಿನಿಮಾ ಸೊಗಸುಗಾರ ಚಿತ್ರವೂ ಪ್ರಶಸ್ತಿ ಪಟ್ಟಿಯಲ್ಲಿ ಇತ್ತು. ಹೀಗಿದ್ದೂ ಅವರು ಯಾವುದೇ ರೀತಿಯ ತಾರತಮ್ಯ ಮಾಡದೇ ಆ ಚಿತ್ರವನ್ನು ಹೊರಗಿಡಬೇಕು ಎಂದು ಕೇಳಿಕೊಂಡರು. ಭಾರತಿ ವಿಷ್ಣುವರ್ಧನ್ ಅವರ ಮಾತನ್ನು ಮೀರಿ ಯಾರೊಬ್ಬರೂ ಒಂದು ಹೆಜ್ಜೆಯೂ ಕದಲುತ್ತಿರಲಿಲ್ಲ. ಸೂಪರ್ ಚಿತ್ರಕ್ಕೆ ನಾಲ್ಕು ಓಟು ಬಿತ್ತು. ಉಳಿದ ಮೂವರು ಬೇರೆ ಬೇರೆ ಚಿತ್ರಗಳನ್ನು ಸೂಚಿಸಿದರು. ಕೊನೆಗೆ ಭಾರತಿಯವರು ನನ್ನ ವೋಟನ್ನು ಸೂಪರ್ ಚಿತ್ರಕ್ಕೇ ಹಾಕಿದರು. ಕೊನೇ ಹಂತದಲ್ಲಿ ಅದು ಆಯ್ಕೆಯಾಯಿತು. ಇದರಲ್ಲಿ ನನ್ನದೇನಿದೆ ಹೇಳಿ ತಪ್ಪು?

  4. ಹಾಗಾದರೆ ನಿಮ್ಮ ಮೇಲಿರುವ ಅಪ-ವಾದಕ್ಕೆ ಏನು ಹೇಳುತ್ತೀರಿ?

  ನೋಡಿ ಸ್ವಾಮಿ, ನಾನು ಮನಸ್ಸು ಮಾಡಿದ್ದರೆ ಕಮೀಟಿಗೇ ಸೇರಿಕೊಳ್ಳದೆ ಸೂಪರ್ ಚಿತ್ರದ ಕ್ಯಾಮೆರಾವರ್ಕೆಗೆ ಬೆಸ್ಟ್ ಕ್ಯಾಮೆರಾಮನ್ ಅವಾರ್ಡ್ ಹೊಡೆಯಬಹುದಿತ್ತು; ಪಡೆಯಬಹುದಿತ್ತು. ನನಗೆ ಅವೆಲ್ಲಾ ಬೇಕಿಲ್ಲ. ಎಷ್ಟೋ ಜನ ಫೋನ್ ಮಾಡಿ, ಸರ್ ನಿಮ್ಮ ಸೂಪರ್ ಛಾಯಾಗ್ರಹಣ ತುಂಬಾ ಚೆನ್ನಾಗಿತ್ತು. ಕಾಂಪಿಟೇಟ್ ಮಾಡಿದ್ದರೆ ಖಂಡಿತ ಅವಾರ್ಡ್ ಬರುತ್ತಿತ್ತು ಎಂದರು. ಆದರೆ ನಾನು ಅಂಥ ಕೆಲಸ ಮಾಡಲಿಲ್ಲ!

  5. ಹಾಗಾದರೆ ಅವಾರ್ಡ್ ಕಮಿಟಿಯಲ್ಲಿ ಯಾವುದೇ ಇನ್ಫ್ಲೂಯೆನ್ಸ್ ನಡೆದಿಲ್ಲವಾ?

  ಖಂಡಿತಾ ಇಲ್ಲ. ನೀವು ನಂಬುವುದಿಲ್ಲ. ಇದೇ ಅವಾರ್ಡ್ ಅನೌನ್ಸ್ ಆಗುವ ದಿನ ನಾವು ಎಂಟೂ ಜನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ, ಒಂದು ಕಡೆ ಅದನ್ನು ಎತ್ತಿಟ್ಟಿದ್ದೆವು. ಬೇವಿನ ಮರದ್ ಅವರೂ ಮೊಬೈಲ್ ಸೈಡಿಗೆ ಇಟ್ಟಿದ್ದರು. ಸಿ.ಎಂ. ಅವರಿಗೆ ಅದು ತಲುಪುವ ತನಕವೂ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದೇವೆ!

  6. ಕಮಿಟಿಯಲ್ಲಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಿದಿರಾ?

  ಖಂಡಿತ ಮಾಡಿದ್ದೇವೆ. ಪತ್ರಕರ್ತರೊಬ್ಬರನ್ನು ಬಿಟ್ಟರೆ ಉಳಿದೆಲ್ಲರೂ ಯಾವುದೇ ಗೊಂದಲ, ಅನಗತ್ಯ ಚರ್ಚೆ ಮಾಡಲು ಇಷ್ಟಪಡಲಿಲ್ಲ. ಭಾರತಿಯವರು ಅಚ್ಚುಕಟ್ಟಾಗಿ ಎಲ್ಲವನ್ನೂ ನಿಭಾಯಿಸಿದರು. ಆದರೆ ಪತ್ರಕರ್ತರೊಬ್ಬರಿಗೆ ಕಮರ್ಷಿಯಲ್ ಸಿನಿಮಾಗಿಂತಾ ಆರ್ಟ್ ಸಿನಿಮಾಗೇ ಅವಾರ್ಡ್ ಬರಬೇಕು ಎಂಬ ಹಟ ಇತ್ತು. ಆದರೆ ನನ್ನ ಮತ್ತು ನಮ್ಮ ಉಳಿದವರ ಪ್ರಕಾರ ಸಿನಿಮಾ ಎಂದರೆ ಆರ್ಟ್-ಕಮರ್ಷಿಯಲ್ ಬೇಧ-ಭಾವ ಅಲ್ಲ, ಒಳ್ಳೆಯ ಅಥವಾ ಒಳ್ಳೆಯದು ಎನಿಸದ ಸಿನಿಮಾ ಎಂಬ ಎರಡೇ ಕೆಟಗರಿ ಇರುವುದು. ಆದರೆ ನನಗೆ ಆ ಪತ್ರಕರ್ತರ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಕ್ಷಮೆ ಇರಲಿ!

  7. ಹಾಗಾದರೆ ಯಾರೂ ನಮಗೆ ಅವಾರ್ಡ್ ಕೊಡಿ ಎಂದು ಒತ್ತಡ ತರಲಿಲ್ಲವೇ?

  ಒಂದು ವಿಷಯ ಹೇಳುತ್ತೇನೆ ಕೇಳಿ, ಇವತ್ತಿಗೂ ನನ್ನ ಮೊಬೈಲ್ನಲ್ಲಿ ರೆಕಾರ್ಡರ್ ಆಗಿದೆ. ಯಾರ್ಯಾರು ಎಷ್ಟೆಷ್ಟು ಸಲ ಫೋನ್ ಮಾಡಿದ್ದಾರೆ. ನಮಗೇ ಅವಾರ್ಡ್ ಕೊಡಿ ಎಂದು ಅವಾಜ್ ಹಾಕಿದ್ದಾರೆ ಎನ್ನುವುದರ ಫುಲ್ ಡೀಟೇಲ್ಸ್ ನನ್ನ ಮೊಬೈಲ್ನಲ್ಲಿ ಸ್ಟೋರ್ ಆಗಿದೆ. ಅವರೆಲ್ಲರ ಜಾತಕ ಬಯಲಿಗೆಳೆಯುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಆದರೆ ನನಗೆ ಅದ್ಯಾವುದೂ ಬೇಕಾಗಿಲ್ಲ. ತೀರ್ಥಹಳ್ಳಿಯಲ್ಲಿ ಧಾರಾವಾಹಿಯೊಂದರ (ಪ್ರೀತಿಯಿಂದ) ಶೂಟಿಂಗ್ ಮಾಡಿಕೊಂಡು ಆರಾಮಾಗಿ ಇದ್ದೇನೆ. ನನ್ನ ಹೆಸರು ಕೆಡಿಸಲು ಪ್ರಯತ್ನ ಮಾಡಿದವರಿಗೆ ಆ ಭಗವಂತ ಒಳ್ಳೆಯದನ್ನು ಮಾಡಲಿ...

  English summary
  This is Exclusive Interview of Cinematographer Ashok Kashyap by Vinayakaram Kalgar.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X