ಘಟಶ್ರಾದ್ಧ ಛಾಯಾಗ್ರಾಹಕ ಎಸ್ ರಾಮಚಂದ್ರ ವಿಧಿವಶ

ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ಧ, ಗುಲಾಬಿ ಟಾಕೀಸ್ ಸೇರಿದಂತೆ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ರಾಮಚಂದ್ರ ಕೆಲಸ ಮಾಡಿದ್ದಾರೆ. ಚೋಮನ ದುಡಿ, ಅನ್ವೇಷಣೆ, ಸಂತ ಶಿಶುನಾಳ ಶರೀಫ, ದೇವೀರಿ, ಮನೆ, ಆಕ್ರಮಣ ಅವರ ಛಾಯಾಗ್ರಹಣದ ಕೆಲವು ಚಿತ್ರಗಳು. 1977ರಲ್ಲಿ ತೆರೆಕಂಡ 'ಋಷ್ಯಶೃಂಗ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದೆ.
ಹಿಂದಿ ಚಿತ್ರಗಳಾದ ಯಾದೇ,ರಾಕಿ, ಪರದೇಸಿ ಹಾಗೂ ಪರ್ವಾನಿ ಚಿತ್ರಗಳಿಗೂ ರಾಮಚಂದ್ರ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಕಿರುತೆರೆಯ ಜನಪ್ರಿಯ ಧಾರಾವಾಹಿ 'ಮಾಲ್ಗುಡಿ ಡೇಸ್'ಸನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಖ್ಯಾತಿ ರಾಮಚಂದ್ರ ಅವರಿಗೆ ಸಲ್ಲುತ್ತದೆ. ಐದು ಬಾರಿ ರಾಜ್ಯ ಪ್ರಶಸ್ತಿ ಹಾಗೂ 2006ರಲ್ಲಿ ಜೀವಮಾನ ಸಾಧನೆಗಾಗಿ ರಾಷ್ಟ್ರಪ್ರಶಸ್ತಿಗೆ ರಾಮಚಂದ್ರ ಅವರು ಭಾಜನರಾಗಿದ್ದಾರೆ.
More from Filmibeat
English summary
Kannada films renowned cinematographer S Ramachandra passes away on Jan 10, 2010. He was 65 years old. Ghatashraddha, Gulabi Talkies, Chomana Dudi, Malgudi Days are some of his works as cinematographer. He has also won the Lifetime Achievement Award (at the State Film Awards) given by the Karnataka State Government in the year 2006.
ಎಸ್ ರಾಮಚಂದ್ರ ನಿಧನವಾರ್ತೆ ಘಟಶ್ರಾದ್ಧ ಗುಲಾಬಿ ಟಾಕೀಸ್ ದೇವೀರಿ ಸಂತ ಶಿಶುನಾಳ ಶರೀಫ ಮಾಲ್ಗುಡಿ ಡೇಸ್ s ramachandra obituary ghatashraddha gulabi talkies deveeri


Click it and Unblock the Notifications











