For Quick Alerts
  ALLOW NOTIFICATIONS  
  For Daily Alerts

  ಗಿರೀಶ್ ಕಾಸರವಳ್ಳಿ 'ಕ್ರೌರ್ಯ' ಚಿತ್ರ ಪ್ರದರ್ಶನ

  By Rajendra
  |

  ಪ್ರತಿಭಾನ್ವಿತ ನಿರ್ದೇಶಕರೆಂದೇ ಖ್ಯಾತರಾಗಿರುವ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳನ್ನು ನೋಡುವ ಚಾನ್ಸ್ ಸಾಮಾನ್ಯವಾಗಿ ಎಲ್ಲರಿಗೂ ಸಿಗೋದಿಲ್ಲ. ಅವರ ಚಿತ್ರಗಳು ಚಿತ್ರಮಂದಿರಗಳಿಗೆ ಬರೋದೇ ಅಪರೂಪ. ಫೋಟೋ ಶೂಟು, ಮುಹೂರ್ತ, ಬಿಡುಗಡೆ, ಕುಂಬಳಕಾಯಿ ಹೊಡೆಯುವುದು...ಗಾಂಧಿನಗರ ಭಾಷೆಯ ಚಿತ್ರ ಅಲ್ಲವೇ ಅಲ್ಲ. ಆದರೆ ಪ್ರಶಸ್ತಿ ಮಾತ್ರ ಮಿಸ್ ಆಗಲ್ಲ.

  ಗಿರೀಶ್ ಕಾಸರವಳ್ಳಿ ಅವರ ಅಪರೂಪದ ಚಿತ್ರಗಳಲ್ಲಿ ಒಂದಾದ 'ಕ್ರೌರ್ಯ' (1996) ಚಿತ್ರ ಪ್ರದರ್ಶನನ್ನು ಏರ್ಪಡಿಸಲಾಗಿದೆ. ಚಿತ್ರ ಸಮೂಹ ಹಾಗೂ ಕೆವಿ ಸುಬ್ಬಣ್ಣ ಆಪ್ತ ಸಮೂಹ ಜಂಟಿಯಾಗಿ ಈ ಕಾರ್ಯವನ್ನು ಹಮ್ಮಿಕೊಂಡಿವೆ. ಎಲ್ ವೈದ್ಯನಾಥನ್ ಅವರ ಸಂಗೀತವಿರುವ ಈ ಚಿತ್ರಕ್ಕೆ ಕತೆ ಟಿ ಎನ್ ಸೀತಾರಾಮ್ ಬರೆದಿದ್ದಾರೆ.

  ಚಿತ್ರದ ಪಾತ್ರವರ್ಗದಲ್ಲಿ ಮಾಸ್ಟರ್ ವಿಶ್ವಾಸ್, ದತ್ತಾತ್ರೇಯ, ರೇಣುಕಮ್ಮ ಮುರುಗೋಡು, ವಿಜಯ ಎಕ್ಕುಂಡಿ, ಅಶೋಕ್ ಹೆಗಡೆ, ಸ್ವಾತಿ ಮುಂತಾದ ಕಲಾವಿದರಿದ್ದಾರೆ. ಚಿತ್ರದ ತಾಂತ್ರಿಕ ಹಾಗೂ ಕಲಾ ಬಳಗದ ಜೊತೆ ಸಂವಾದವೂ ಇರುತ್ತದೆ. ಇದೇ ಭಾನುವಾರ (ಮಾ.11) ಸಂಜೆ 5 ಗಂಟೆಗೆ ಕೆವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ. ವಿಳಾಸ: ನಂ.151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, ಬೆಂಗಳೂರು-78. (ಒನ್‌ಇಂಡಿಯಾ ಕನ್ನಡ)

  English summary
  Girish Kasaravalli's Kraurya film show held on Sunday 11th March 2011 at 5.00 pm at K V Subbanna Aaptha Rangamandira. Kraurya is the story of Rangajji, a widow who loves to tell stories of fantasy to the children of her village.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X