»   » ಸುಸೈಡ್ ಮಾಡಿಕೊಳ್ಳುವವರಿಗೊಂದು ನೀತಿಪಾಠ

ಸುಸೈಡ್ ಮಾಡಿಕೊಳ್ಳುವವರಿಗೊಂದು ನೀತಿಪಾಠ

Posted By:
Subscribe to Filmibeat Kannada

ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಎಂದು ಎಲ್ಲರಿಗೂ ಗೊತ್ತು. ಆದರೂ ಅಂಥವರ ಸಂಖ್ಯೆ ಕಡಿಮೆಯಾಗಿಲ್ಲ. ಜೀವನದಲ್ಲಿ ಎಂಥದ್ದೇ ಕಷ್ಟ ಬಂದರೂ ತೊಂದರೆ ಎದುರಾದರೂ ಆತ್ಮಹತ್ಯೆಯಂಥಾ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಧೈರ್ಯದಿಂದ ಜೀವನವನ್ನು ಎದುರಿಸಿ ಎಂದು ಆತ್ಮಹತ್ಯ ಮಾಡಿಕೊಳ್ಳಬೇಕೆನ್ನುವವರಿಗೆ ನೀತಿಪಾಠ ಹೇಳುವಂಥ ಸಿನಿಮಾವೊಂದು ತಯಾರಾಗಿದೆ .

'ಸೂಸೈಡ್' ಹೆಸರಿನ ಈ ಚಿತ್ರಕ್ಕೆ ಪ್ರಸಾದ್ ಗುರು ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದು ನಿರ್ದೇಶಿಸುವುದರ ಜೊತೆಗೆ ಅವರೇ ನಿರ್ಮಿಸಿದ್ದಾರೆ.ಈ ಚಿತ್ರದ ಪ್ರಥಮ ಪ್ರತಿ ಕಳೆದ ತಿಂಗಳು ಬಂದಿದ್ದು ಇತ್ತೀಚಿಗೆ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸಮಾಜಕ್ಕೆ ನೀತಿ ಪಾಠ ಹೇಳುವಂಥ ಅದ್ಭುತ ಸಿನಿಮಾ ಮಾಡಿದ್ದೀರಿ ಎಂದು ನಿರ್ದೇಶಕರನ್ನು ಪ್ರಶಂಸಿಸಿ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.

ನೆನಪು ಟಾಕೀಸ್ ಲಾಂಛನದಲಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎ.ಟಿ.ರವಿ ಸಂಗೀತ, ಸುರೇಂದ್ರನಾಥ್ ಬೇಗೂರು ಛಾಯಾಗ್ರಹಣ, ಪಾಂಡು.ಕೆ.ರಾಮನಾರಾಯಣ್ ಸಾಹಿತ್ಯ ಈ ಚಿತ್ರದ ತಾರಾಬಳಗದಲ್ಲಿ ಋತ್ವಿಕ್, ಕಲ್ಯಾಣಿ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಸಂಗೀತಾ ಶೆಟ್ಟಿ, ಭಾಗ್ಯಲಕ್ಷ್ಮಿ, ಕೋಕಿಲಾ, ಸಾನು ಕಾವೇರಪ್ಪ ಅಭಿಯನಿಯಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada