»   » 'ನಂದೀಶ'ನಾಗಿ ಹಾಸ್ಯನಟ ಕೋಮಲ್

'ನಂದೀಶ'ನಾಗಿ ಹಾಸ್ಯನಟ ಕೋಮಲ್

Posted By:
Subscribe to Filmibeat Kannada

ತಮ್ಮ ವಿಭಿನ್ನ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಕಚಗುಳಿಯಿಟ್ಟ ಕೋಮಲ್ ಕುಮಾರ್ ಇದೀಗ 'ನಂದೀಶ'ನಾಗಿ ಬರಲಿದ್ದಾರೆ. ಶುಕ್ರವಾರ ಧರ್ಮಸ್ಥಳದಲ್ಲಿ ಕೋಮಲ್ ಹೊಸ ಚಿತ್ರ 'ನಂದೀಶ' ಸೆಟ್ಟೇರಿತು. ಇಪ್ಪತ್ತೈದು ದಿನಗಳ ಕಾಲ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ ಕೆಸರುಗದ್ದೆ ಓಟ (ಕಂಬಳ) ಮೂಲದ ನಾಯಕನ ಪರಿಚಯವಾಗುವ ಸನ್ನಿವೇಶವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಕೋಮಲ್ ತಿಳಿಸಿದ್ದಾರೆ. ಪಿ ವಾಸು ಹಾಗೂ ಆರ್ ವಿ ಉದಯಕುಮಾರ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಪ್ರಭಾಕರ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ.ನಿರ್ದೇಶಕ ಪಿ ವಾಸು ಜೊತೆ ಆಪ್ತರಕ್ಷಕ ಚಿತ್ರಕ್ಕೂ ಪ್ರಭಾಕರ್ ಕೆಲಸ ಮಾಡಿದ್ದರು.

ಮೂಲತಃ ವಕೀಲರಾದ ಪ್ರಭಾಕರ್ ನಟ ಕೋಮಲ್ ಜೊತೆ ಸೇರಿ ಜಂಟಿಯಾಗಿ ಚಿತ್ರಕತೆಯನ್ನು ರಚಿಸಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಗ್ರಾಮೀಣ ನೇಪಥ್ಯದ ಈ ಚಿತ್ರವನ್ನು ಸೌಂದರ್ಯ ಲಹರಿ ಕಂಬೈನ್ಸ್ ಲಾಂಛನದಲ್ಲಿ ಕೋಮಲ್ ಪತ್ನಿ ಅನಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿದ್ದಾರೆ. ಸಂಗೀತ ಗುರುಕಿರಣ್ ಅವರದು ಛಾಯಾಗ್ರಹಣ ಕವಿಯರಸು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada