»   » ಥೇನ್ ಸಂತ್ರಸ್ತರಿಗೆ ನಯನತಾರಾ ರು.5 ಲಕ್ಷ ದೇಣಿಗೆ

ಥೇನ್ ಸಂತ್ರಸ್ತರಿಗೆ ನಯನತಾರಾ ರು.5 ಲಕ್ಷ ದೇಣಿಗೆ

Posted By:
Subscribe to Filmibeat Kannada

ಸಿನಿಮಾ ತಾರೆ ನಯನತಾರಾ 'ಥೇನ್' ಚಂಡಮಾರುತ ಸಂತ್ರಸ್ತರಿಗೆ ರು.5 ಲಕ್ಷ ದೇಣಿಗೆ ನೀಡಿದ್ದಾರೆ. ತಮಿಳುನಾಡು ಸರ್ಕಾರ ಸ್ಥಾಪಿಸಿರುವ 'ಥೇನ್ ಚಂಡಮಾರುತ ಸಂತ್ರಸ್ತರ ಪರಿಹಾರ ನಿಧಿ'ಗೆ ಈ ಮೊತ್ತವನ್ನು ನೀಡಿದರು. ಇತ್ತೀಚೆಗೆ ಚೆನ್ನೈನಲ್ಲಿ ಮುಖ್ಯಮಂತ್ರಿ ಜಯಲಲಿತಾರನ್ನು ಭೇಟಿಯಾಗಿ ಪರಿಹಾರದ ಮೊತ್ತವನ್ನು ಸಲ್ಲಿಸಿದರು.

ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಥೇನ್ ಚಂಡಮಾರುತ ಸಂತ್ರಸ್ತರ ನಿಧಿಗೆ ರು.10 ಲಕ್ಷ ದೇಣಿಗೆ ನೀಡಿದ್ದರು. ಅಂದಹಾಗೆ ನಯನತಾರಾ ಮತ್ತೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಸಾಧ್ಯತೆಗಳಿವೆ. ನಯನಿ ಮತ್ತು ಪ್ರಭುದೇವಾ ಮದುವೆ ಬಗ್ಗೆ ಸದ್ಯಕ್ಕೆ ಸುದ್ದಿಯಿಲ್ಲ.

ತಮಿಳುನಾಡು ಕರಾವಳಿಯನ್ನು ಅಪ್ಪಳಿಸಿದ್ದ 'ಥೇನ್' ಚಂಡಮಾರುತ ತಮಿಳುನಾಡು ಹಾಗೂ ಪುದುಚೇರಿಯಲ್ಲಿ 12 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿತ್ತು. ಚಂಡಮಾರುತ ತಣ್ಣಗಾಗುವ ವೇಳೆಗೆ ಉತ್ತರ ತಮಿಳುನಾಡಿನಲ್ಲಿ ಜನಜೀವನ ಪೂರ್ಣ ಅಸ್ತವ್ಯಸ್ತವಾಗಿತ್ತು. (ಏಜೆನ್ಸೀಸ್)

English summary
Actress Nayantara donated Rs5 Lakhs towards the relief work for Thane Cyclone hit areas of Tamilnadu. She handed over a cheque for the sum to the Chief Minister of Tamilnadu Jayalalithaa at the Secretariat.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X