For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಜೊತೆ ಶಶಿಕುಮಾರ್ ಅಂದರ್ ಬಾಹರ್‌

  By Rajendra
  |

  ನಟ ಶಶಿಕುಮಾರ್ ಅವರಿಗೆ ಮಾಸ್ ಇಮೇಜ್ ಇಲ್ಲದಿದ್ದರೂ ಅವರ ಡ್ಯಾನ್ಸ್ ಮೋಡಿಗೆ ಮರುಳಾಗದವರು ವಿರಳ ಎಂದೇ ಹೇಳಬಹುದು. ಶಶಿಕುಮಾರ್ ಹೆಜ್ಜೆ ಹಾಕುತ್ತಿದ್ದರೆ ಅಭಿಮಾನಿಗಳ ಕೈಕಾಲುಗಳಲ್ಲೂ ಒಂದು ರೀತಿ ಕರೆಂಟ್ ಬಂದಂತಾಗುತ್ತದೆ. ಇಷ್ಟೆಲ್ಲಾ ಪುರಾಣ ಹೇಳಲು ಕಾರಣ ಸುದೀರ್ಘ ಸಮಯದ ಬಳಿಕ ಶಶಿಕುಮಾರ್ ಮತ್ತೆ ಬರುತ್ತಿದ್ದಾರೆ. ಆದರೆ ಕುಣಿಯಲು ಅಂತೂ ಖಂಡಿತ ಅಲ್ಲವೇ ಅಲ್ಲ. ಅವರು ಬರುತ್ತಿರುವುದು ತನಿಖಾಧಿಕಾರಿಯಾಗಿ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಶಶಿಕುಮಾರ್ ಅಭಿನಯಿಸಲಿದ್ದಾರೆ. ಚಿತ್ರದ ಹೆಸರು 'ಅಂದರ್ ಬಾಹರ್'. ಮಾರ್ಚ್ 12ರಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಸೆಟ್ಟೇರಲಿದೆ. 'ಜೋಗಿ' ಚಿತ್ರದ ಬಳಿಕ ಅರುಂಧತಿ ನಾಗ್ ಅವರು ಶಿವಣ್ಣನಿಗೆ ಮತ್ತೊಮ್ಮೆ ತಾಯಿಯಾಗಿ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ.

  "ಜೈ ಹೋ" ಖ್ಯಾತಿಯ ವಿಜಯ್ ಪ್ರಕಾಶ್ ಅವರ ಸಂಗೀತ ಚಿತ್ರಕ್ಕಿದ್ದು ಶೇಖರ್ ಚಂದ್ರು ಅವರ ಛಾಯಾಗ್ರಹಣವಿದೆ. ಶಿವಣ್ಣನಿಗೆ ನಾಯಕಿಯಾಗಿ ಪಾರ್ವತಿ ಮೆನನ್ ಅಭಿನಯಿಸಲಿದ್ದಾರೆ. ಈಗಾಗಲೆ ಫೋಟೋ ಶೂಟ್ ಮುಗಿಸಿಕೊಂಡಿರುವ ಈ ಚಿತ್ರವನ್ನು ಪ್ರಣೀಶ್ ನಿರ್ದೇಶಿಸುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  After a long gap Kannada actor Shashikumar back to action. He will play an important character of an investigative officer in Shivarajkumar, Parvathy Menon leadr Kannada movie Andar Bahar. Jai Ho fame Vijaya Prakash scores the music and directed by Phaneesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X