»   »  ಐ.ಪಿ.ಸಿ ಸೆಕ್ಷನ್ 300ಗೆ ಹಾಡು ಹೆಣೆಯುವ ಸಮಯ

ಐ.ಪಿ.ಸಿ ಸೆಕ್ಷನ್ 300ಗೆ ಹಾಡು ಹೆಣೆಯುವ ಸಮಯ

Posted By:
Subscribe to Filmibeat Kannada
Vijay Raghavendra
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಐ.ಪಿ.ಸಿ ಸೆಕ್ಷನ್ 300 ಚಿತ್ರಕ್ಕೆ ಈಗ ಹಾಡುಗಳ ಚಿತ್ರೀಕರಣವಾಗುತ್ತಿರುವ ಸಮಯ. ವಿಜಯ್‌ರಾಘವೇಂದ್ರ ಮತ್ತು ಪ್ರಿಯಾಂಕ ಅವರ ಅಭಿನಯದಲ್ಲಿ 'ದಿಲ್ ಇದ್ದ ಮೇಲೆ ಚಿಂತೆ ಯಾಕೋ ಇರುವುದು ದಾರಿ ಜೋಶ್ ಬೇಕು' ಎಂಬ ಗೀತೆಯ ಚಿತ್ರೀಕರಣ ಶ್ರೀರಾಂಪುರದ ಭೂಮಿಕಾ ಸ್ಟೂಡಿಯೋದಲ್ಲಿ ನೆರವೇರಿತು. ನಾಗೇಂದ್ರ ಪ್ರಸಾದ್ ರಚಿಸಿರುವ ಈ ಗೀತೆಗೆ ಸದಾ ನೃತ್ಯ ಸಂಯೋಜಿಸಿದ್ದಾರೆ.

ಮಾತಿನ ಭಾಗದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳನ್ನು ಪೂರ್ಣಗೊಳಿಸಿರುವ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಪೂರ್ಣಗೊಂಡ ನಂತರ ಡಿ.ಟಿ.ಎಸ್ ತಂತ್ರಜ್ಞಾನ ಅಳವಡಿಸಿ ಪ್ರಥಮ ಪ್ರತಿ ಸಿದ್ದಪಡೆಸುವುದಾಗಿ ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ. ಕುತೂಹಲ ಭರಿತ ಈ ಚಿತ್ರ ಪ್ರೇಮಕಥೆಯಿಂದಲ್ಲೂ ಕೂಡಿದೆ ಅನ್ನುತ್ತಾರೆ ನಿರ್ದೇಶಕ ಶಶಿಕಾಂತ್.

ಶ್ರೀಚೌಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಶಶಿಕಾಂತ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಯತಿರಾಜ್, ಶಂಕರ್, ರವೀಂದ್ರನಾಥ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada