»   »  ವಿಡಿಯೋ: ದರ್ಶನ್ ಅಭಿನಯದ ಅಭಯ್

ವಿಡಿಯೋ: ದರ್ಶನ್ ಅಭಿನಯದ ಅಭಯ್

Subscribe to Filmibeat Kannada

ಮೈಸೂರು, ಬೆಂಗಳೂರು, ಬ್ಯಾಂಕಾಕ್ ಮತ್ತು ಸ್ವಿಟ್ಜರ್ ಲ್ಯಾಂಡ್ ನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಚಿತ್ರ 'ಅಭಯ್'. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಮತ್ತೊಂದು ಸಾಹಸಭರಿತ ಚಿತ್ರ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುವಂತಾಗಿದೆ.

ಮಹೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಅಲ್ಲದೇ ಸಂಭಾಷಣೆಯನ್ನೂ ಕೂಡಾ ಜನಾರ್ದಾನ ಮಹರ್ಷಿ ಬರೆದಿದ್ದಾರೆ. ರಮೇಶ್ ಬಾಬು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.

ನಿತಿನ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಭಯ್ ಚಿತ್ರವನ್ನು ಬಾಬುರೆಡ್ಡಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ದರ್ಶನ್, ಆರತಿ ಠಾಕೂರ್, ಪ್ರದೀಪ್ ರಾವತ್, ಓಂ ಪ್ರಕಾಶ್ ರಾವ್, ಸಲೀಂ ಬೇಗ್, ಆರ್ಯಮಾನ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada