»   »  ಶ್ರೀಮತಿ ಚಿತ್ರಕ್ಕೆ ಸಹಿ ಹಾಕಿದ ಸೆಲೀನಾ ಜೇಟ್ಲಿ

ಶ್ರೀಮತಿ ಚಿತ್ರಕ್ಕೆ ಸಹಿ ಹಾಕಿದ ಸೆಲೀನಾ ಜೇಟ್ಲಿ

Subscribe to Filmibeat Kannada
ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಕನ್ನಡ ಚಿತ್ರದಲ್ಲಿ ನಟಿಸಲು ಕೊನೆಗೂ ಒಪ್ಪಿದ್ದಾರೆ. ಆಕೆ ಕನ್ನಡಕ್ಕೆ ಬರುತ್ತಾರೋ ಇಲ್ಲವೋ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ಉಪೇಂದ್ರ ನಟಿಸುತ್ತಿರುವ 'ಶ್ರೀಮತಿ' ಚಿತ್ರದಲ್ಲಿ ನಟಿಸಲು ಆಕೆ ಸಹಿ ಹಾಕಿದ್ದಾರೆ.

ಶ್ರೀಮತಿ ಚಿತ್ರದಲ್ಲಿ ನಟ, ನಿರ್ದೇಶಕ ಮತ್ತ್ತು ನಿರ್ಮಾಪಕ ಪ್ರಕಾಶ್ ರೈ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ನಟನೆಯ ಜತೆಗೆ ಕಥೆ, ಚಿತ್ರಕಥೆ, ನಿರ್ದೇಶನದ ಜವಾಬ್ದಾರಿಯನ್ನು ಉಪೇಂದ್ರ ಹೊತ್ತಿರುವುದು ವಿಶೇಷ.

ಹಿಂದಿಯ 'ಐತ್ ರಾಜ್"' ಚಿತ್ರದ ರೀಮೇಕ್ ಶ್ರೀಮತಿ ಎನ್ನಲಾಗಿದೆ. ಅಬ್ಬಾಜ್ ಮಸ್ತಾನ್ ನಿರ್ದೇಶಿಸಿದ್ದ ಐತ್ ರಾಜ್ ಚಿತ್ರದಲ್ಲಿ ಅಕ್ಷಯ್ ಕುಮಾರ್, ಕರೀನಾ ಕಪೂರ್ ಮತ್ತು ಪ್ರಿಯಾಂಕ ಚೋಪ್ರ ನಟಿಸಿದ್ದರು. ಪ್ರಿಯಾಂಕ ಚೋಪ್ರಗೆ ಫಿಲ್ಮ್ ಫೇರ್ ಅತ್ಯುತ್ತಮ ಖಳ ನಟಿ ಪ್ರಶಸ್ತಿಯನ್ನು ಐತ್ ರಾಜ್ ತಂದುಕೊಟ್ಟಿತ್ತು.

ಮತ್ತೊಂದು ಆಸಕ್ತಿಕರವಾದ ವಿಚಾರವೆಂದರೆ,ಐತ್ ರಾಜ್ ಚಿತ್ರದಲ್ಲಿ ಸೆಲೀನಾ ಜೇಟ್ಲಿ ನಟಿಸಬೇಕಾಗಿತ್ತಂತೆ. ಆ ಪಾತ್ರ ನಕಾರಾತ್ಮಕ ಅಂಶಗಳನ್ನು ಒಳಗೊಂಡ ಕಾರಣ ಸೆಲೀನಾ ಒಲ್ಲೆ ಎಂದಿದ್ದರಂತೆ. ಚಿತ್ರದಲ್ಲಿನ ಪ್ರಿಯಾಂಕ ಚೋಪ್ರ ನಟನೆ ವಿಮರ್ಶಕರ ಮತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಉಪೇಂದ್ರ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಸೆಲೀನಾ
ಶ್ರೀಮತಿಗೆ ಉಪೇಂದ್ರ ವ್ಯಾಲೆಂಟೈನ್ ಉಡುಗೊರೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada