»   »  ಚೆಲುವಿನ ಚಿಲಿಪಿಲಿ ಹಾಡಿದ ಕಲಾ ಸಾಮ್ರಾಟ್

ಚೆಲುವಿನ ಚಿಲಿಪಿಲಿ ಹಾಡಿದ ಕಲಾ ಸಾಮ್ರಾಟ್

Posted By:
Subscribe to Filmibeat Kannada
Cheluvina Chilipili, a sentimental love story
ತಮ್ಮ ಮಗ ಪಂಕಜ್ ರನ್ನು ನಾಯಕ ನಟನನ್ನಾಗಿ 'ಚೆಲುವಿನ ಚಿಲಿಪಿಲಿ' ಎಂಬ ಹೊಸ ಚಿತ್ರವನ್ನು ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ ರೂಪಿಕಾ ಚೆಲುವಿನ ಚಿಲಿಪಿಲಿಯ ನಾಯಕಿ.

ಆರು ಹಾಡುಗಳನ್ನು ಹೊಂದಿರುವ ಚೆಲುವಿನ ಚಿಲಿಪಿಲಿ ಪ್ರೇಮ ಕಥಾಹಂದರ ಜತೆಗೆ ಹೃದಯ ಮೀಟುವ ಸನ್ನಿವೇಶಗಳನ್ನು ಹೊಂದಿದೆಯಂತೆ. ಬುಧವಾರದಿಂದ (ಮಾರ್ಚ್ 11) ಚಿತ್ರೀಕರಣ ಶುರುವಾಗಿದೆ. ನಾರಯಣ್ ನಿರ್ದೇಶನದಲ್ಲಿ ಬಂದ 'ಚೈತ್ರದ ಚಂದ್ರಮ' ಮೂಲಕ ಪಂಕಜ್ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಚೆಲ್ಲಿದರು ಸಂಪಿಗೆಯಾ ಚಿತ್ರದಲ್ಲಿ ನಾರಾಯಣ್ ಕಾರ್ಯಮಗ್ನರಾಗಿದ್ದಾರೆ. ಒರಟ ಪ್ರಶಾಂತ್, ಬಿಯಾಂಕ ದೇಸಾಯಿ, ವಿಶಾಲ್, ಸ್ಫೂರ್ತಿ, ಅನಂತ್ ನಾಗ್ ಮತ್ತು ಮುಖ್ಯಮಂತ್ರಿ ತಾರಾಗಣವನ್ನು ಸಂಪಿಗೆ ಚಿತ್ರ ಒಳಗೊಂಡಿದೆ. ಈ ಚಿತ್ರದ ವಿಶೇಷತೆ ಎಂದರೆ, 1000 ಹೆಚ್ಚು ಬಾಲ ಕಲಾವಿದರನ್ನು ಬಳಸಿಕೊಂಡಿರುವುದು.

(ದಟ್ಸ್ ಕನ್ನಡ ಚಿತ್ರವಾರ್ತೆ)


ಸಂಪಿಗೆ ಪರಿಮಳದಲ್ಲಿ ಬಿಯಾಂಕ ದೇಸಾಯಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada