»   »  ಪುನೀತ್ ರ ರಾಮ್ ಚಿತ್ರದಲ್ಲಿ ಅತಿಥಿ ಯಾಗಿ ಚೇತನ್!

ಪುನೀತ್ ರ ರಾಮ್ ಚಿತ್ರದಲ್ಲಿ ಅತಿಥಿ ಯಾಗಿ ಚೇತನ್!

Subscribe to Filmibeat Kannada

'ಆ ದಿನಗಳು' ಖ್ಯಾತಿಯ ನಟ ಚೇತನ್ ರನ್ನು ಅತಿಥಿ ಪಾತ್ರವೊಂದು ಹುಡುಕಿಕೊಂಡು ಬಂದಿದೆ! ಅದೂ ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ ನಟಿಸುವ ಅವಕಾಶ. ಅಷ್ಟೇ ಅಲ್ಲ ಚೇತನ್ ಬಾಲ್ಯದಿಂದಲೂ ಪುನೀತ್ ರ ಕಟ್ಟಾ ಅಭಿಮಾನಿ. ಹಾಗಾಗಿ ಹಿಂದೆ ಮುಂದೆ ಆಲೋಚಿಸದೆ ಪುನೀತ್ ಚಿತ್ರದಲ್ಲಿ ನಟಿಸಲು ಚೇತನ್ ಒಪ್ಪಿಕೊಂಡಿದ್ದಾರೆ.

ಪ್ರಸ್ತುತ ಪುನೀತ್ 'ರಾಮ್' ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ತೆಲುಗಿನ ರೆಡಿ ಚಿತ್ರದ ರೀಮೇಕ್ ಚಿತ್ರವೇ ರಾಮ್. ಚೇತನ್ ಗೆ ಅವಕಾಶ ಸಿಕ್ಕಿರುವುದು ಈ ಚಿತ್ರದಲ್ಲಿ ನಟಿಸಲು . ರಾಮ್ ಚಿತ್ರದಲ್ಲಿ ಚೇತನ್ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇದಕ್ಕಾಗಿ 'ಸೂರ್ಯಕಾಂತಿ' ಚಿತ್ರವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದಾರೆ!

ಅಮೆರಿಕಾದ ನನ್ನ ಬಾಲ್ಯದ ದಿನಗಳಲ್ಲಿ 'ಭಕ್ತ ಪ್ರಹ್ಲಾದ' ನನ್ನ ಮೆಚ್ಚಿನ ಚಿತ್ರವಾಗಿತ್ತು ಎನ್ನುತ್ತಾರೆ ನಟ ಚೇತನ್. ಬಾಲ್ಯದಲ್ಲಿ ಏಕಪಾತ್ರಾಭಿನಯ ಮಾಡಲು ಭಕ್ತ ಪ್ರಹ್ಲಾದನ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದೆ. ಅಪ್ಪು ಸರ್ ಪ್ರಹ್ಲಾದನ ಪಾತ್ರಕ್ಕೆ ಜೀವ ತುಂಬಿದ್ದರು ಎಂದು ತಮ್ಮ 'ಆ ದಿನಗಳ'ನ್ನು ನೆನೆಯುತ್ತಾರೆ ಚೇತನ್.

ಅಪ್ಪು ಜತೆ ನಟಿಸಲು ಅವಕಾಶ ಸಿಕ್ಕಿರುವುದಕ್ಕೆ ಚೇತನ್ ಖುಷಿಯಾಗಿದ್ದಾರೆ. ಅಪ್ಪು ಸರ್ ನನಗೆ ಕೊಡುತ್ತಿರುವ ಗೌರವ ಎನ್ನುತ್ತಾರೆ ಚೇತನ್. ರಾಮ್ ಚಿತ್ರದಲ್ಲಿ ಚೇತನ್ ರದ್ದು ಸಾಫ್ಟ್ ವೇರ್ ಎಂಜಿನಿಯರ್ ಪಾತ್ರವಂತೆ. ಈ ಪಾತ್ರವನ್ನು ಕೇವಲ ಒಂದೇ ದಿನದಲ್ಲಿ ಚಿತ್ರೀಕರಿಸಲಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಅಪ್ಪು ಅವರೊಂದಿಗೆ ಮಾತನಾಡಿದೆ ನಿಜಕ್ಕೂ ಮನಸ್ಸು ಹಗುರವಾಯಿತು ಎನ್ನುತ್ತಾರೆ ಚೇತನ್.

ಅಪ್ಪು ಅವರನ್ನು ವ್ಯಕ್ತಿಯಾಗಿ ಮತ್ತು ನಟನಾಗಿ ನಾನು ಇಷ್ಟಪಡುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ಇಷ್ಟು ಬೇಗ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದು ಸರಿಯೋ ತಪ್ಪೋ ಗೊತ್ತಿಲ್ಲ.ಆದರೆ ಅಪ್ಪು ಸರ್ ಬಗ್ಗೆ ತುಂಬು ಗೌರವ ಇದೆ ಎನ್ನುತ್ತಾರೆ ಚೇತನ್. ಚೇತನ್ ಈಗಾಗಲೇ ಚೈತನ್ಯ ನಿರ್ದೇಶಿಸುತ್ತಿರುವ 'ಸೂರ್ಯಕಾಂತಿ'ಯಲ್ಲಿ ನಟಿಸುತ್ತಿರುವುದು ಗೊತ್ತೆ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada