»   » ಜೇಡ್‌ಗಾರ್ಡನ್‌ನಲ್ಲಿ ದುಶ್ಯಂತನ ಕಲ್ಯಾಣ

ಜೇಡ್‌ಗಾರ್ಡನ್‌ನಲ್ಲಿ ದುಶ್ಯಂತನ ಕಲ್ಯಾಣ

Posted By:
Subscribe to Filmibeat Kannada

ಬೆಂಗಳೂರು ಹೊರವಲಯದ ಜೇಡ್‌ಗಾರ್ಡನ್‌ನಲ್ಲಿ ಅಂದು 'ಮದುವೆಮನೆ'ಯ ಸಡಗರ. ಎಲ್ಲಿ ನೋಡಿದರೂ ಜನಜಂಗುಳಿ. ಮಂಗಳವಾದ್ಯಗಳ ನಿನಾದ. ಇಷ್ಟು ಸಂಭ್ರಮದಲ್ಲಿ ದುಶ್ಯಂತ ಹಾಗೂ ಸುಮಳ ಕಲ್ಯಾಣ ಮಹೋತ್ಸವ ವೈಭವದಿಂದ ನಡೆದಿದೆ. ಇವರ ಸ್ನೇಹಿತ ಸೂರಜ್ 'ಮದುವೆಮನೆ'ಯ ಪ್ರಮುಖ ಆಕರ್ಷಣೆ.

ಸುಮಳನ್ನು ಹಸೆಮಣೆಗೆ ಕರೆದುಕೊಂಡು ಬರುವ ಉಸ್ತುವಾರಿಯು ಸೂರಜ್‌ನದೆ. ಈ ಸನ್ನಿವೇಶವನ್ನು 'ಮದುವೆಮನೆ' ಚಿತ್ರಕ್ಕಾಗಿ ನಿರ್ದೇಶಕ ಸುನೀಲ್‌ಕುಮಾರ್ ಸಿಂಗ್ ಜೇಡ್‌ಗಾರ್ಡನ್‌ನಲ್ಲಿ ಚಿತ್ರಿಸಿಕೊಂಡರು. ಈ ಮದುವೆ ಸನ್ನಿವೇಶಕ್ಕಾಗಿ ಕಲಾನಿರ್ದೇಶಕ ಮೋಹನ್ ಬಿ ಕೆರೆ ಚಿತ್ತಾಕರ್ಷಕ ಸೆಟ್ ನಿರ್ಮಿಸಿದ್ದರು. ದುಶ್ಯಂತ್ ಪಾತ್ರದಲ್ಲಿ ಅವಿನಾಶ್(ಜುಗಾರಿ), ಸುಮಳಾಗಿ ಶ್ರದ್ಧಾಆರ್ಯ, ಸೂರಜ್ ಪಾತ್ರದಲ್ಲಿ ಗಣೇಶ್ ಅಭಿನಯಸಿದ್ದರು. ಹನುಮಂತೇಗೌಡ, ಶರಣ್, ತಬಲನಾಣಿ, ಚಿತ್ಕಲಾ, ಧನಲಕ್ಷ್ಮೀ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿದ್ದರು.

ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆ' ಚಿತ್ರಕ್ಕೆ ಸುನೀಲ್‌ಕುಮಾರ್ ಸಿಂಗ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್‌ಚಂದ್ರು ಛಾಯಾಗ್ರಹಣವಿದೆ. ಸೌಂದರ್ ರಾಜ್ ಸಂಕಲನ, ರವಿವರ್ಮ ಸಾಹಸ ಈ ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada