»   »  ಚಂಕಾಯ್ಸಿ ಚಿಂದಿ ಉಡಾಯ್ಸಿಸಿದ ನಿಧಿ ಸುಬ್ಬಯ್ಯ!

ಚಂಕಾಯ್ಸಿ ಚಿಂದಿ ಉಡಾಯ್ಸಿಸಿದ ನಿಧಿ ಸುಬ್ಬಯ್ಯ!

Posted By:
Subscribe to Filmibeat Kannada

ಕೋಮಲ್ ಚಿತ್ರದಲ್ಲಿನ 'ಬೇಜಾನ್ ಪ್ರೀತಿ ಮಾಡು...' ಎಂಬ ಹಾಡಿನಲ್ಲಿ ನಿಧಿ ಸುಬ್ಬಯ್ಯ ಚಂಕಾಯ್ಸಿ ಚಿಂದಿ ಉಡಾಯ್ಸಿದ್ದಾರಂತೆ. ಶ್ರೇಯಾ ಘೋಶಾಲ್ ಹಾಡಿರುವ ಈ ಹಾಡಿಗೆ ಕಿವಿಗೊಟ್ಟ ಪ್ರೇಕ್ಷಕರು ಮನಸೋತಿದ್ದಾರೆ. ಈ ಹಾಡನ್ನು ಹಾಂಗ್ ಕಾಂಗ್ ನ ಸುಂದರ ನೀರಿನ ತಾಣಗಳಲ್ಲಿ ಚಿತ್ರೀಕರಿಸಲಾಗಿರುವುದು ವಿಶೇಷ.

ಈ ಹಾಡನ್ನು ನೋಡಿರುವ ನಿಧಿ ಸ್ವತಃ ನಿಬ್ಬೆರಗಾಗಿದ್ದಾರೆ. ತೆರೆಯ ಮೇಲೆ ತಾನು ಇಷ್ಟು ಅಂದವಾಗಿ ಕಾಣಿಸುತ್ತೇನೆ ಅಂದು ಕೊಂಡಿರಲಿಲ್ಲವಂತೆ.ಕೇವಲ ಉತ್ತರ ಭಾರತದ ನಟಿಯರಷ್ಟೇ ಗ್ಲಾಮರಸ್ ಪಾತ್ರಗಳಿಗೆ ಸೀಮಿತ ಅನ್ನುವುದನ್ನು ಈ ಚಿತ್ರದಲ್ಲಿ ನಾನು ಸುಳ್ಳು ಮಾಡಿದ್ಡೇನೆ ಎನ್ನುತ್ತಾರೆ ನಿಧಿ.

ಬಹಳಷ್ಟು ಮಂದಿ ನೀವು ಉತ್ತರ ಭಾರತದವರೆ ಎಂದು ಕೇಳಿದ್ದಾರೆ. ಉತ್ತರ ಭಾರತದ ನಟಿಯರು ಮಾತ್ರ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುತ್ತಾರೆ ಎಂಬ ಭಾವ ಹಲವರಲ್ಲಿದೆ. ನಿಧಿ ನಟಿಸುತ್ತಿರುವ ಮತ್ತೊಂದು ಚಿತ್ರ 'ಕೃಷ್ಣ ನೀ ಲೇಟಾಗಿ ಬಾರೊ' ಹೆಸರಿಗೆ ತಕ್ಕಂತೆ ಬಿಡುಗಡೆ ಸಹ ಲೇಟಾಗುತ್ತಿದೆ.

ಈ ಹಿಂದೆ ಕೋಮಲ್ ಜೊತೆ ನಟಿಸಲು ರಮ್ಯಾ ನಿರಾಕರಿಸಿದ್ದರು. ಕಾರಣ ಕೋಮಲ್ ನೋಡಲು ಅಷ್ಟಕ್ಕಷ್ಟೇ ಎಂಬ ಧೋರಣೆ ರಮ್ಯಾರದ್ದು. ಆದರೆ ಕೋಮಲ್ ವಿಚಾರದಲ್ಲಿ ನಿಧಿ ಹಾಗೆ ಮಾಡಲಿಲ್ಲ. ಉತ್ತರ ಭಾರತದ ನಟಿಯರಿಗಿಂತ ತಾನೇನು ಕಮ್ಮಿ ಎಂದು ಸಡ್ಡು ಹೊಡೆದಿದ್ದಾರೆ ಕೊಡಗಿನ ಬೆಡಗಿ ನಿಧಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada